ಶನಿವಾರ, ಸೆಪ್ಟೆಂಬರ್ 25, 2021
22 °C

ಎಂ.ಜಿ.ಮೋಟರ್‌ನಿಂದ ಆಂಬುಲೆನ್ಸ್‌ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂ.ಜಿ.ಮೋಟರ್‌ ಇಂಡಿಯಾ, ಎಂ.ಜಿ.ಸೇವಾ ಅಭಿಯಾನದ ಅಡಿಯಲ್ಲಿ ಜೀವನ್‌ ಜ್ಯೋತಿ ಟ್ರಸ್ಟ್‌ಗೆ ಅತ್ಯಾಧುನಿಕ ಆಂಬುಲೆನ್ಸ್‌ ಕೊಡುಗೆ ನೀಡಿದೆ.

ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಆರೋಗ್ಯ ಕ್ಷೇತ್ರ ಬಲ‍ಪಡಿಸುವ ನಿಟ್ಟಿನಲ್ಲಿ ಎಂ.ಜಿ.ಮೋಟರ್‌ ಇಂಡಿಯಾ ಸಂಸ್ಥೆಯು ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಕೆಜಿಎಫ್‌ನ ನಿವಾಸಿಗಳು ಆಂಬುಲೆನ್ಸ್‌ ಇಲ್ಲದೆ ಪರದಾಡುತ್ತಿದ್ದುದ್ದನ್ನು ಮನಗಂಡಿದ್ದ ಜೀವನ್‌ ಜ್ಯೋತಿ ಟ್ರಸ್ಟ್, ಆಂಬುಲೆನ್ಸ್‌ಗಾಗಿ ಎಂ.ಜಿ.ಮೋಟರ್‌ ಬಳಿ ಮನವಿ ಮಾಡಿತ್ತು. ಇದಕ್ಕೆ ಸಂಸ್ಥೆಯು ಸಕಾರಾತ್ಮಕವಾಗಿ ಸ್ಪಂದಿಸಿದೆ.

‘ನಮ್ಮ ಕೋರಿಕೆಯನ್ನು ಪರಿಗಣಿಸಿ ಆಂಬುಲೆನ್ಸ್‌ ಕೊಡುಗೆಯಾಗಿ ನೀಡಿರುವ ಎಂ.ಜಿ.ಮೋಟರ್‌ಗೆ ಆಭಾರಿಯಾಗಿದ್ದೇವೆ. ಈ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಈ ಆಂಬುಲೆನ್ಸ್‌ನಿಂದ ಕೆಜಿಎಫ್‌ನ ಜನರಿಗೆ ತುಂಬಾ ಅನುಕೂಲವಾಗಲಿದೆ’ ಎಂದು ‘ಹಿಯರ್‌ ಐಆ್ಯಮ್‌ ಸ್ಕ್ವಾಡ್‌’ನ ನಿಕೋಲ್‌ ಚೆರಿಯನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು