ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಮೌಳಿ, ವಾಣಿರಾವ್‌ ಅವರಿಗೆ ಅನಕೃ ಪ್ರಶಸ್ತಿ

Last Updated 3 ನವೆಂಬರ್ 2022, 22:20 IST
ಅಕ್ಷರ ಗಾತ್ರ

ಬೆಂಗಳೂರು: ಅನಕೃ ಪ್ರತಿಷ್ಠಾನದ 2021ನೇ ಸಾಲಿನ ಅನಕೃ ಪ್ರಶಸ್ತಿಯನ್ನು ವಿಮರ್ಶಕ ಕೆ. ಚಂದ್ರಮೌಳಿ ಹಾಗೂ ವಸಂತದೇವಿ ಅನಕೃ ಪ್ರಶಸ್ತಿಯನ್ನು
ಲೇಖಕಿ ಡಾ. ವಾಣಿ
ರಾವ್‌ ಅವರಿಗೆ ಸಂದಿದೆ.

ಕೆ. ಚಂದ್ರಮೌಳಿ ಅವರು ಚಿಕ್ಕಮಗಳೂರಿನವರಾಗಿದ್ದು,
ಮುಂಬೈ, ಕೊಯಮತ್ತೂರು, ಬೆಳಗಾವಿ
ಯಲ್ಲಿ ಎಂಜಿನಿಯರ್‌ ಆಗಿದ್ದರು. ಕೇಂದ್ರ ಜಲಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಸಮಿತಿಯ ‘ಗಂಗೆಯನ್ನು ಉಳಿಸಿ’ ಆಂದೋಲನಕ್ಕೆ ವಿಶೇಷ ಸಲಹೆಗಾರರಾಗಿದ್ದರು.
ಕಾಶಿ ಬಗ್ಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಡಾ. ವಾಣಿರಾವ್‌ ಅವರು ಉಡುಪಿ
ಯವರಾಗಿದ್ದು, 28 ವರ್ಷ ಶಿಕ್ಷಕಿಯಾಗಿದ್ದರು. ಹೋಮಿಯೊಪತಿ ಪದವಿ ಪಡೆ
ದಿದ್ದು, ನಾಲ್ಕು ಭಾಷಾಂತರ, 55 ಲೇಖನ,
120 ಸಣ್ಣಕತೆ, 62 ಕಾದಂಬರಿ, 60 ಮಕ್ಕಳ ಕತೆಗಳನ್ನು ರಚಿಸಿದ್ದಾರೆ. ಅವರ ‘ಹೆಜ್ಜೆಗಳು’ ಆತ್ಮಕಥೆ ಇತ್ತೀಚೆಗೆ ಪ್ರಕಟವಾಗಿದೆ.

ಅನಕೃ ಪ್ರಶಸ್ತಿ ₹50 ಸಾವಿರ ಹಾಗೂ ವಸಂತಾದೇವಿ ಅನಕೃ ಪ್ರಶಸ್ತಿ ₹25 ಸಾವಿರ ನಗದು ಒಳಗೊಂಡಿದೆ. ಬಸವನಗುಡಿಯ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಮಲ್ಟಿಮೀಡಿಯಾ ಸಭಾಂಗಣದಲ್ಲಿ ನ.13ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್‌ ಅನಕೃ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT