ಬೆಂಗಳೂರು: ‘ಸಾಹಿತ್ಯ ರಚನೆಯ ಜತೆಗೆ ಕನ್ನಡ ಪರ ಹೋರಾಟದ ರೋಚಕ ಅಧ್ಯಾಯಕ್ಕೆ ಅ.ನ.ಕೃಷ್ಣರಾಯ (ಅ.ನ.ಕೃ) ಅವರು ಕಾರಣೀಭೂತರಾಗಿದ್ದರು’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಜಯನಗರದ ಭಾರತ್ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಅ.ನ.ಕೃ ಅವರ ‘ಸಂಧ್ಯಾರಾಗ’ ಕೃತಿಯ ಬಗ್ಗೆ ಅವರು ಮಾತನಾಡಿದರು.

‘ಅ.ನ.ಕೃ ಅವರು ಕಾದಂಬರಿಕಾರರಾಗಿ ಮಾತ್ರ ಗುರುತಿಸಿಕೊಳ್ಳದೆ ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿದರು. ಇಲ್ಲಿನ ನೆಲ-ಜಲ-ಭಾಷೆಗಾಗಿ ಅವರು ಮ. ರಾಮಮೂರ್ತಿ ಅವರ ಜತೆ ಸೇರಿ ನಡೆಸಿದ ಹೋರಾಟಗಳು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಧ್ಯಾಯವಾಗಿದೆ. ಅವರು ಬರಹಗಾರರಾಗಿ ಮಾತ್ರವಲ್ಲದೆ, ಕನ್ನಡ ಪರ ಹೋರಾಟಗಾರರಾಗಿಯೂ ಮಹತ್ವ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಅವರ ‘ಸಂಧ್ಯಾರಾಗ’ ಕಾದಂಬರಿ ಪ್ರಕಟವಾಗಿ 91 ವರ್ಷಗಳಾಗಿವೆ. ಇಂದಿಗೂ ಅದು ಜನಮನ್ನಣೆ ಉಳಿಸಿಕೊಂಡಿದೆ. ಇದರಿಂದಾಗಿ ಆ ಕಾದಂಬರಿಯ ಶ್ರೇಷ್ಠತೆಯನ್ನು ನಾವು ಗುರುತಿಸಬಹುದು’ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ‘ಅ.ನ.ಕೃ ಅವರ ‘ಸಂಧ್ಯಾರಾಗ’ ಕೃತಿ ಜನಮನ್ನಣೆ ಗಳಿಸುವ ಜತೆಗೆ ಚಲನಚಿತ್ರವಾಗಿಯೂ ಅಪಾರ ಜನಪ್ರಿಯತೆ ಪಡೆಯಿತು. ಅಂತಹ ಸಾಹಿತ್ಯ ಕೃತಿಗಳು ಸದಾ ಸಮಾಜಕ್ಕೆ ಸ್ಫೂರ್ತಿ ತುಂಬುತ್ತದೆ. ಉತ್ತಮ, ಸಶಕ್ತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅದು ಸಾಹಿತ್ಯದ ಓದಿನಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಭಾರತ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ.ಎನ್.ಎಸ್. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಆರ್.ನಿರ್ಮಲ ಕುಮಾರ್, ಉಪಾಧ್ಯಕ್ಷ ಶಿವಲಿಂಗೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.