ಶನಿವಾರ, ಡಿಸೆಂಬರ್ 14, 2019
24 °C

ಆನಂದ್‌ ಸಿಂಗ್‌ ಆಸ್ತಿ ₹33ಕೋಟಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಒಂದೇ ವರ್ಷದಲ್ಲಿ ಆನಂದ್‌ ಸಿಂಗ್‌ ಅವರ ಆಸ್ತಿ ₹33 ಕೋಟಿ ಏರಿಕೆಯಾಗಿದೆ. ಅದೇ ರೀತಿ ₹12 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿದ್ದಾರೆ.2018ರಲ್ಲಿ ಅವರ ಒಟ್ಟು ಆಸ್ತಿ ₹71.36 ಕೋಟಿ ಇತ್ತು. 2019ರಲ್ಲಿ ಅದು ₹104.42 ಕೋಟಿಗೆ ಹೆಚ್ಚಳವಾಗಿದೆ. 2018ರಲ್ಲಿ ₹17.42 ಕೋಟಿ ಸಾಲ ಇತ್ತು. ಅದೀಗ ₹30.84 ಕೋಟಿಗೆ ಹೆಚ್ಚಾಗಿದೆ.

ಆನಂದ್‌ ಸಿಂಗ್‌ ಅವರ ಪತ್ನಿ ಲಕ್ಷ್ಮಿ ಸಿಂಗ್‌ ಅವರ ಆಸ್ತಿಯಲ್ಲಿ ₹31.61 ಕೋಟಿ ಹೆಚ್ಚಳವಾಗಿದೆ. 2018ರಲ್ಲಿ ₹40.68 ಕೋಟಿ ಆಸ್ತಿ ಹೊಂದಿದ್ದ ಅವರು, ಸದ್ಯ ₹72.29 ಕೋಟಿಯ ಒಡತಿಯಾಗಿದ್ದಾರೆ. 2018ರಲ್ಲಿ ಯಾವುದೇ ಸಾಲ ಇರಲಿಲ್ಲ. ಈಗ ₹42.64 ಕೋಟಿ ಸಾಲ ಮಾಡಿಕೊಂಡಿದ್ದಾರೆ.

ಆನಂದ್ ಸಿಂಗ್ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿವರ ಬಹಿರಂಗಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)