ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕ

7
ಕಾಲು ಜಾರಿ ನೀರಿಗೆ ಬಿದ್ದ ಸುಮಂತ್‌

ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕ

Published:
Updated:
Deccan Herald

ಆನೇಕಲ್: ತಾಲ್ಲೂಕಿನ ಗುಡ್ಡನಹಳ್ಳಿ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿದ್ದಾರೆ. ಮೃತರನ್ನು ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಸುಮಂತ್ (25) ಎಂದು ಗುರುತಿಸಲಾಗಿದೆ.

ಬೆಳಿಗ್ಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಬಂದಿದ್ದರು. ಗುಡ್ಡನಹಳ್ಳಿ ಕೆರೆ ಏರಿ ಮೇಲೆ ಹೊಸೂರು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಬಹಿರ್ದೆಸೆ ಮುಗಿಸಿ ಕಾಲು ತೊಳೆಯಲು ಕೆರೆಗೆ ಇಳಿದಿದ್ದರು. ಆಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಈಜು ಬಾರದ ಕಾರಣ ಕೆರೆಯಲ್ಲಿನ ಗುಂಡಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ನೀರಿನಲ್ಲಿ ಮುಳುಗುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ನೋಡಿದ್ದಾರೆ. ಅವರಿಗೂ ಈಜು ಬಾರದ ಕಾರಣ ತಕ್ಷಣ, ಸ್ನೇಹಿತರಾದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಓಂಕಾರ್‌ಗೆ ಮಾಹಿತಿ ನೀಡಿದ್ದಾರೆ. ಓಂಕಾರ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಕ್ಕಾಗಿ ಶೋಧ ನಡೆಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !