ಆನೇಕಲ್: ಪಟ್ಟಣದ ತಿಗಳರ ಬೀದಿಯ ಪಾರ್ಥಸಾರಥಿ ಭಜನೆಮನೆಯ ದ್ರೌಪದಮ್ಮ ದೇವಿ ಹಸಿ ಕರಗ ಮಹೋತ್ಸವವು ವಿಜೃಂಭಣೆಯಿಂದ ಶುಕ್ರವಾರ ಮುಂಜಾನೆ ನಡೆಯಿತು. ನೂರಾರು ಮಂದಿ ಭಕ್ತರು ವೈಭವದ ಕರಗಕ್ಕೆ ಸಾಕ್ಷಿಯಾದರು.

ಕರಗ ವೀಕ್ಷಣೆ ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರಿಂದ ಪಟ್ಟಣದ ಜನಜಾತ್ರೆ ಉಂಟಾಗಿತು. ಪಟ್ಟಣದಲ್ಲಿ ಮಲ್ಲಿಗೆ ಘಮಲು ಕರಗ ಸಂಭ್ರಮಕ್ಕೆ ದೈವಿಕ ಭಾವನೆ ತಂದಿತು. ಗಂಟೆಯ ನಾದ, ಡಮರಿನ ಸದ್ದು, ವೀರಕುಮಾರ ಅಲಗು ಸೇವೆ ಕರಗ ಮೆರವಣಿಗೆ ಮೆರಗು ನೀಡಿದವು.

ಆನೇಕಲ್ ಥಳೀ ರಸ್ತೆಯಲ್ಲಿನ ಭಜನೆ ಮನೆಯ ದ್ರೌಪದಮ್ಮ ದೇವಿ ದೇವಾಲಯದಿಂದ ಶುಕ್ರವಾರ ಬೆಳಗಿನ ಜಾನ 3.20ರ ಸುಮಾರಿಗೆ ಕರಗ ಹೊತ್ತ ಚಂದ್ರಪ್ಪ ಅವರಿ ಮಂಡಿಗಾಲಿನಲ್ಲಿ ದೇವಾಲಯದ ಗರ್ಭಗುಡಿಯಿಂದ ಹೊರಬರುತ್ತಿದ್ದಂತೆ ಭಕ್ತರು ಜಯಘೋಷದೊಂದಿಗೆ ಕರಗ ಸ್ವಾಗತಿಸಿದರು.

ಭಜನೆ ಮನೆಯ ಮುಂಭಾಗದಲ್ಲಿ ಗೋವಿಂದ..ಗೋವಿಂದ.. ಘೋಷಣೆಗಳು ಮುಗಿಲುಮುಟ್ಟಿದ್ದವು. ವೀರಕುಮಾರರು ಅಲಗು ಸೇವೆಯೊಂದಿಗೆ ಕರಗವನ್ನು ಬರಮಾಡಿಕೊಂಡರು. ಡಿಕ್ ಡೀ, ಡಿಕ್ ಡೀ, ದಿಕ್ ತೈ ದಿಕ್ ತೈ ಕೂಗಿ ಕತ್ತಿಗಳಿಂದ ತಮ್ಮ ಎದೆಗೆ ಹೊಡೆದುಕೊಂಡು ಅಲಗು ಸೇವೆ ಸಲ್ಲಿಸಿದರು.

ಮೂರು ತಾಸಿಗೂ ಹೆಚ್ಚು ಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕರಗ ಭಕ್ತರ ಕಣ್ಮನ ಸೆಳೆಯಿತು. ಪಟ್ಟಣದೆಲ್ಲೆಡೆ ಭಕ್ತರ ದಂಡು ನೆರೆದಿತ್ತು. ಕರಗವು ಮನೆ ಮನೆಗಳ ಮುಂದೆ ಸಾಗುತ್ತಿದ್ದಂತೆ ಹೂವಿನಿಂದ ರಂಗೋಲಿಯನ್ನು ಬಿಡಿಸಿ ಕರಗವನ್ನು ಬರಮಾಡಿಕೊಂಡರು. ಮಲ್ಲಿಗೆ ಹೂವುಗಳನ್ನು ಕರಗದತ್ತ ಎಸೆಯುವ ಮೂಲಕ ಭಕ್ತರ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.