ಆನೇಕಲ್: ತಾಲ್ಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀಸಾಗರದಲ್ಲಿ ಶನಿವಾರ ಕೃಷಿಹೊಂಡದಲ್ಲಿ ಬಿದ್ದು ಎಂಟು ವರ್ಷದ ಮಗು ಮತ್ತು ತಾಯಿ ಮೃತಪಟ್ಟಿದ್ದಾರೆ.

ಲಕ್ಷ್ಮೀಸಾಗರದ ಲಾವಣ್ಯ(28), ಇವರ ಪುತ್ರಿ ಲಕ್ಷತಾ(8) ಮೃತರು. ಘಟನೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ ಮೃತ ಯುವತಿಯ ಪೋಷಕರು ಇದೊಂದು ಸಂಚು ಎಂದು ಲಾವಣ್ಯ ಪತಿ ವಿರುದ್ಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಮಿಳುನಾಡಿನ ಲಾವಣ್ಯ ಅವರು 2017ರಲ್ಲಿ ಸಂಪತ್ ಕುಮಾರ್ ಅವರೊಂದಿಗೆ ವಿವಾಹವಾಗಿದ್ದರು. ಶನಿವಾರ ಏಕಾಏಕಿ ಕೃಷಿ ಹೊಂಡದಲ್ಲಿ ಮಗಳೊಂದಿಗೆ ಲಾವಣ್ಣ ಮೃತ ಪತ್ತೆಯಾಗಿವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದು ಆತ್ಮಹತ್ಯೆಯೂ ಆಗಿರಬಹುದು ಅಥವಾ ಕೃಷಿ ಹೊಂಡದಲ್ಲಿ ಮುಳಗುತ್ತಿದ್ದ ಮಗು ರಕ್ಷಣೆ ಮಾಡಲು ಹೋಗಿ ಇಬ್ಬರು ಮೃತಪಟ್ಟಿರಬಹುದು. ತನಿಖೆಯಿಂದ ಸತ್ಯಾತ್ಯತೆ ತಿಳಿಯಲಿದೆ. ಅಲ್ಲಿಯವರೆಗೆ ಯಾವುದನ್ನು ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-15-84174858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.