ಆನೇಕಲ್: ತಾಲ್ಲೂಕಿನ ಹೀಲಲಿಗೆ ಸಮೀಪ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಅವರನ್ನು ಕೆಲ ದುಷ್ಕರ್ಮಿಗಳು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ನಡೆದಿದೆ. ಸೂರ್ಯಸಿಟಿ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ದಯಾನಂದ ರೆಡ್ಡಿ ಪ್ರತಿಕ್ರಿಯಿಸಿ, ‘ಸೋಮವಾರ ರಾತ್ರಿ ಸುಮಾರು 12.15ಸಮಯದಲ್ಲಿ ಗೋಲ್ಡ್ಕಾಯಿನ್ ಕ್ಲಬ್ನಿಂದ ಮನೆಯತ್ತ ಬರುವಾಗ ಹೀಲಲಿಗೆ ಬಳಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ತಮಗೆ ಗಿಫ್ಟ್ ಇದೆ ಎಂದಾಗ ಚಾಲಕ ಕಾರು ನಿಲ್ಲಿಸಿದ ತಕ್ಷಣ ಕಾರು ಹತ್ತಿದ ದುಷ್ಕರ್ಮಿಗಳು, ತಲೆಗೆ ಗನ್ ಇಟ್ಟು ಜಿಗಣಿ ಸೂರ್ಯಸಿಟಿ 3ನೇ ಹಂತಕ್ಕೆ ಕರೆದೊಯ್ದರು’.

‘ಬೆಳಗಿನ ಜಾವ 4.45ರವರೆಗೂ ನಾಲ್ವರು ದುಷ್ಕರ್ಮಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಟ್ರೇಡಿಂಗ್ನಲ್ಲಿ ಹಣ ಕಳೆದುಕೊಂಡಿದ್ದೇವೆ. ಕುಟುಂಬ ಸಾಗಿಸುವುದೇ ಕಷ್ಟವಾಗಿದೆ. ನಿಮ್ಮನ್ನು ಅಪಹರಣ ಮಾಡಲು ₹10 ಕೋಟಿ ಸುಫಾರಿ ಪಡೆದಿದ್ದೇವೆ. ಈ ಪೈಕಿ ₹3 ಕೋಟಿ ಖರ್ಚು ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘3 ಕೋಟಿ ಹಣ ನೀವು ನೀಡಬೇಕು. ನಿಮಗೆ ಯಾವುದೇ ತೊಂದರೆ ಕೊಡುವ ಉದ್ದೇಶವಿಲ್ಲ. ನಿಮ್ಮ ಬಗ್ಗೆ ವಿಕಿಪಿಡಿಯಾದಲ್ಲಿ ತಿಳಿದುಕೊಂಡಿದ್ದೇವೆ. ಸಮಾಜಕ್ಕೆ ನೀವು ಅಪಾರ ಕೊಡುಗೆ ನೀಡಿದ್ದೀರಿ’ ಎಂದಿದ್ದಾರೆ. ಈ ಸಮಯದಲ್ಲಿ ದಯಾನಂದರೆಡ್ಡಿ, ಹಣ ನೀಡುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ, ಈಗ ನಗದು ಹಣವಿಲ್ಲ. ಮೊಬೈಲ್ ಸಂಖ್ಯೆ ನೀಡಿ ಬೆಳಗ್ಗೆ ಹಣ ಕೊಡುತ್ತೇನೆ ಎಂದು ಹೇಳಿ ಅಪಹರಣಕಾರರಿಂದ ಪಾರಾಗಿದ್ದಾರೆ.

ನಂತರ ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು: ಪ್ರಕರಣದ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆ ಸಿಡಿಆರ್ ಪರಿಶೀಲನೆ ನಡೆಸಿದ ಪೊಲೀಸರು, ಪ್ರವೀಣ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸಿಸಿಟಿವಿ ಕ್ಯಾಮೆರಾವಿಲ್ಲದ ಜಾಗ ಹುಡುಕಿದ್ದ ಅಪಹರಣಕಾರರು: ಕೇರಳ ಮೂಲದ ಅಪಹರಣಕಾರರು ದಯಾನಂದರೆಡ್ಡಿ ಅವರನ್ನು ಅಪಹರಿಸಲು ಸಿಸಿಟಿವಿ ಕ್ಯಾಮೆರಾ ಇಲ್ಲದ ಜಾಗ ಹುಡುಕಿದ್ದಾರೆ. ಅವರ ಚಲನವಲನ ಗಮನಿಸಿ ಸೋಮವಾರ ಮಧ್ಯರಾತ್ರಿ ಅಪಹರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-18-266460618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.