ಆನೇಕಲ್: ತಾಲ್ಲೂಕಿನ ಗುಡ್ಡಹಟ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ–44ರ ಕಾಮಗಾರಿ ಸ್ಥಳದಲ್ಲಿ ಮತ್ತೆ ಗುರುವಾರ ಭೂ ಕುಸಿತ ಉಂಟಾಗಿದ್ದು, ಕಾರ್ಮಿಕರೊಬ್ಬರು ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಕಾರ್ಮಿಕ ಆಲಮ್ ಅವರಿಗೆ ಸಣ್ಣ–ಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 44ರಲ್ಲಿನ ಚಂದಾಪುರ-ಅತ್ತಿಬೆಲೆ ರಸ್ತೆಯಲ್ಲಿ ಮೂರು ಕೇಳಸೇತುವೆ ನಿರ್ಮಿಸಲು ಕಳೆದ 10-11 ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಗುರುವಾರ ಮಧ್ಯಾಹ್ನ ಕೆಲಸ ಮಾಡುತ್ತಿರುವ ಸಮಯದಲ್ಲಿ ಏಕಾಏಕಿ ಭೂಕುಸಿತವಾಗಿ ಕಾರ್ಮಿಕ ಹಳ್ಳಕ್ಕೆ ಬಿದ್ದು ಮಣ್ಣು ಮುಚ್ಚಿಕೊಂಡಿತ್ತು. ತಕ್ಷಣವೇ ಉಳಿದರು ಮಣ್ಣಿನಿಂದ ಮೇಲಕ್ಕೆ ಎತ್ತಿದರು. ಇದರಿಂದ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಮೆಗತಿ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇಲ್ಲಿ ಕಿ.ಮೀ ಗಟ್ಟಲೇ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರ ನಡುವೆ ಭೂ ಕುಸಿತ ಉಂಟಾಗಿರುವುದರಿಂದ ಪಕ್ಕದ ರಸ್ತೆ ಇನ್ನಷ್ಟು ಕಿರಿದಾಗಿ ಮತ್ತಷ್ಟು ವಾಹನ ದಟ್ಟಣೆ ಉಂಟಾಗಲಿದೆ.

ಇದೇ ವರ್ಷ ಫೆಬ್ರುವರಿ 3ರಂದು ಇದೇ ಸ್ಥಳದಲ್ಲಿ ಭೂ ಕುಸಿತವಾಗಿತ್ತು. ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ನಿರ್ಲಕ್ಷ್ಯದಿಂದಲೇ ಮತ್ತೆ ಭೂ ಕುಸಿತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನ ಸವಾರರಿಗೆ ಹೆದ್ದಾರಿಗಳೆಂದರೆ ಖುಷಿ, ಆದರೆ ರಾಷ್ಟ್ರೀಯ ಹೆದ್ದಾರಿ–44 ಅವರಿಗೆ ದುಃಸ್ವಪ್ನವಾಗಿದೆ. ಐದಾರು ಕಿ.ಮೀ ವಾಹನ ದಟ್ಟಣೆ, ಹಾರ್ನ್ ಶಬ್ದ, ಕಾಮಗಾರಿಯ ದೂಳು, ಸ್ವಲ್ಪ ವಾಹನಗಳಿಗೆ ತಾಗಿದರೂ ಜಗಳ... ಇವೆಲ್ಲವು ಅವರನ್ನು ಸದಾ ಕಾಡುತ್ತಿರುತ್ತದೆ. ಹೀಗಾಗಿ ಹೆದ್ದಾರಿ–44ರ ಪಯಣಕ್ಕೆ ಸವಾರರು ಹಿಂಜರಿಯುತ್ತಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಒಂದೆರಡು ಕಿ.ಮೀ ಸಾಗಲು ಕನಿಷ್ಠ ಒಂದೂವರೆ ಗಂಟೆಯಾದರೂ ಕಾಯಬೇಕು. ಭಾರಿ ವಾಹನಗಳ ನಡುವೆ ಬೈಕ್ ಸವಾರರು ಗೋಳು ಯಾರಿಗೂ ಕೇಳದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-15-26302392

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.