ಭಾನುವಾರ, ಅಕ್ಟೋಬರ್ 24, 2021
21 °C

ಕುಂಬ್ಳೆ ವೃತ್ತದಲ್ಲಿ ಅಳವಡಿಕೆಯಾಗದ ಫಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿನ ಅನಿಲ್‌ ಕುಂಬ್ಳೆ ವೃತ್ತದಲ್ಲಿ ಕುಂಬ್ಳೆ ಅವರ ಹೆಸರಿನಲ್ಲಿ ಇದ್ದ ಫಲಕ ಕಿತ್ತು ಹಲವು ತಿಂಗಳುಗಳೇ ಕಳೆದಿದ್ದು, ಅದನ್ನು ಮತ್ತೆ ಅಳವಡಿಸಲು ಬಿಬಿಎಂಪಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ ನೆಪದಲ್ಲಿ ಫಲಕ ತೆಗೆದು ಕಂಬವೊಂದಕ್ಕೆ ಒರಗಿಸಲಾಗಿದೆ. ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಕಳೆದರೂ ಫಲಕ ಮಾತ್ರ ಅಲ್ಲೇ ಇದೆ. ಬೆಂಗಳೂರಿನವರೇ ಆದ ಅನಿಲ್‌ ಕುಂಬ್ಳೆ 1990ರ ಏಪ್ರಿಲ್‌ 25ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ದೆಹಲಿಯಲ್ಲಿ 1999ರಲ್ಲಿ ನಡೆದಿದ್ದ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಇನಿಂಗ್ಸ್‌ನಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದರು. ಇದರ ನೆನಪಿಗಾಗಿ ಎಂ.ಜಿ. ರಸ್ತೆಯಲ್ಲಿನ ವೃತ್ತಕ್ಕೆ ಅನಿಲ್‌ ಕುಂಬ್ಳೆ ವೃತ್ತ ಎಂದು ನಾಮಕರಣ ಮಾಡಿ ಫಲಕ ಅಳವಡಿಸಲಾಗಿತ್ತು.

ಕುಂಬ್ಳೆ ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಭಾವಿಸಿರುವ ಸ್ಥಳೀಯ ಜನಪ್ರತಿನಿಧಿಯೊಬ್ಬರು ಫಲಕ ಅಳವಡಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪ ಇದೆ. ರಾಜಕೀಯ ಕಾರಣಕ್ಕೆ ಕ್ರಿಕೆಟ್ ಆಟಗಾರರ ಹೆಸರಿನ ಫಲಕ ಅಳವಡಿಸದೆ ಅವಮಾನ ಮಾಡಬಾರದು ಎಂಬುದು ಕ್ರಿಕೆಟ್ ಪ್ರಿಯರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.