ಗಾಳಿ ಆಂಜನೇಯ ದೇವಸ್ಥಾನದ ಬಳಿ ಮತ್ತೊಂದು ಹನುಮನ ಮೂರ್ತಿ ಪತ್ತೆ

7
ರಾಜಕಾಲುವೆಯಲ್ಲಿ ಹೂಳೆತ್ತುವಾಗ ಸಿಕ್ಕಿದ ಕಲ್ಲಿನ ವಿಗ್ರಹ

ಗಾಳಿ ಆಂಜನೇಯ ದೇವಸ್ಥಾನದ ಬಳಿ ಮತ್ತೊಂದು ಹನುಮನ ಮೂರ್ತಿ ಪತ್ತೆ

Published:
Updated:
Deccan Herald

ಬೆಂಗಳೂರು: ನಗರದ ಮೈಸೂರು ರಸ್ತೆ ಬಳಿಯ ಗಾಳಿ ಆಂಜನೇಯ ದೇವಸ್ಥಾನದ ಸಮೀಪದ ರಾಜಕಾಲುವೆಯ ಹೂಳೆತ್ತುವ ಸಂದರ್ಭದಲ್ಲಿ, 7 ಅಡಿ ಎತ್ತರದ ಕಲ್ಲಿನ ಆಂಜನೇಯ ವಿಗ್ರಹ ಶನಿವಾರ ಪತ್ತೆಯಾಗಿದೆ. ಇದನ್ನು ನೋಡಲು ಜನ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

‘ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ನಾಲ್ಕೈದು ದಿನಗಳಿಂದ ನಡೆಯುತ್ತಿದೆ. ಹೂಳೆತ್ತುವ ವೇಳೆ ಜೆಸಿಬಿ ಅಡಿ ಕಲ್ಲು ಸಿಕ್ಕಿಕೊಂಡಿತು. ಅದನ್ನು ಹೊರಗೆತ್ತಿ ನೋಡಿದಾಗ ಅದು ಆಂಜನೇಯ ಸ್ವಾಮಿ ವಿಗ್ರಹ ಆಗಿತ್ತು. ಅದನ್ನು ಸ್ವಚ್ಛಗೊಳಿಸಿ ಪಕ್ಕದಲ್ಲೇ ಇಟ್ಟಿದ್ದೇವೆ’ ಎಂದು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಶ್ರೀಧರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಮೂರ್ತಿಗೆ ಸಾರ್ವಜನಿಕರು, ಹೂಹಾರ ಹಾಕಿ, ಹಣ್ಣುಕಾಯಿ ಒಡೆದು ಪೂಜೆ ಮಾಡಿದ್ದಾರೆ. ‘ಈ ಮೂರ್ತಿ ಎಷ್ಟು ವರ್ಷ ಹಳೆಯದು ಎಂದು ಖಚಿತವಾಗಿ ಗೊತ್ತಿಲ್ಲ. ಮೇಲ್ನೋಟಕ್ಕೆ ನೂರಾರು ವರ್ಷಗಳು ಹಳೆಯ ಮೂರ್ತಿಯಂತೆ ಕಾಣಿಸುತ್ತಿದೆ’ ಎಂದು ಶ್ರೀಧರ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !