ಬೆಂಗಳೂರು: ಬೆಂಗಳೂರಿನಲ್ಲಿರುವ ಮಲೆನಾಡಿಗರ ವಾರ್ಷಿಕ ಕ್ರೀಡಾಕೂಟವನ್ನು ಜ.18ರಂದು ಸುಂಕದಕಟ್ಟೆ ಶ್ರೀಗಂಧಕಾವಲ್ ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣದಲ್ಲಿ ಸಹ್ಯಾದ್ರಿ ಸಂಘ ಆಯೋಜಿಸಿದೆ.

ಇದು 22ನೇ ವಾರ್ಷಿಕ ಕ್ರೀಡಾಕೂಟವಾಗಿದ್ದು, ಐದು ವರ್ಷದೊಳಗಿನ, 6ರಿಂದ 10 ವರ್ಷದೊಳಗಿನ, 11ರಿಂದ 15 ವರ್ಷದೊಳಗಿನ ಮಕ್ಕಳಿಗೆ, 16ರಿಂದ 25 ವರ್ಷದೊಳಗಿನ, 26ರಿಂದ 35 ವರ್ಷದೊಳಗಿನ ವಯಸ್ಕರಿಗೆ ವಿವಿಧ ಸ್ಪರ್ಧೆಗಳಿವೆ. ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ನೃತ್ಯ, ಅದೃಷ್ಟ ದಂಪತಿ ಮೊದಲಾದ ವಿಶೇಷ ಆಕರ್ಷಣೆಯ ಸ್ಪರ್ಧೆಗಳೂ ಇರಲಿವೆ.

ಸಂಜೆ 6ಕ್ಕೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ. ಉಪ ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಬಿ.ಎಸ್. ಶ್ರೀಧರ್, ಚಿತ್ರನಟಿ ಅಮೂಲ್ಯ, ರಾಮನಗರದ ಹೆಚ್ಚುವರಿ ಎಸ್ಪಿ ರಾಜೇಂದ್ರ ತೂದೂರು, ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲೆಯ ಕಾಮಗಾರಿ ಸಮಿತಿ ಅಧ್ಯಕ್ಷ ಧರ್ಮೇಶ್ ಸಿರಿಬೈಲ್, ಉದ್ಯಮಿ ಜಗದೀಶ್. ಆರ್.ಚಂದ್ರ ಭಾಗವಹಿಸಲಿದ್ದಾರೆ.

ಸಹ್ಯಾದ್ರಿ ಸಂಘದ ಅಧ್ಯಕ್ಷ ಬಿ.ಎ. ಪುರುಷೋತ್ತಮ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಎಚ್.ಸಿ. ಜಯಪ್ರಕಾಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.