ಶನಿವಾರ, ಅಕ್ಟೋಬರ್ 31, 2020
20 °C

ಅನುರಾಗ್‌ಗೆ 147ನೇ ರ‍್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಗರದ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ನ ವಿ.ವಿ. ಅನುರಾಗ್‌ ಅವರು 147ನೇ ರ‍್ಯಾಂಕ್‌ ಪಡೆದಿದ್ದಾರೆ.

ಅನುರಾಗ್ ಅವರು ಒಟ್ಟು 720 ಅಂಕಗಳಲ್ಲಿ 695 ಅಂಕ ಗಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಸಂತಸ ವ್ಯಕ್ತಪಡಿಸಿದ ಅನುರಾಗ್‌, ‘ನನ್ನ ಜೊತೆ ಪರೀಕ್ಷೆ ಬರೆದ ಕೆಲವರು 1,000 ಒಳಗೆ ರ‍್ಯಾಂಕ್‌ ಪಡೆದಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ಇಲ್ಲ’ ಎಂದರು.

ತನುಜಾಗೆ 586 ಅಂಕ: ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಮಧ್ಯಪ್ರವೇಶದ ಬಳಿಕ ನೀಟ್‌ ಬರೆಯಲು ಅವಕಾಶ ಗಿಟ್ಟಿಸಿಕೊಂಡ ಶಿವಮೊಗ್ಗದ ನವೋದಯ ಶಾಲೆಯ ತನುಜಾ ಅವರು 720ರಲ್ಲಿ 586 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.