ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಯುಕ್ತ ಜಮಾತ್ ಖಾಝಿಯಾಗಿ ಎ.ಪಿ.ಅಬೂಬಕ್ಕರ್‌ ಆಯ್ಕೆ

Published : 4 ಆಗಸ್ಟ್ 2024, 14:50 IST
Last Updated : 4 ಆಗಸ್ಟ್ 2024, 14:50 IST
ಫಾಲೋ ಮಾಡಿ
Comments

ಬೆಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಬೆಂಗಳೂರು ಸಂಯುಕ್ತ ಜಮಾತ್‌ನ ಖಾಝಿಯಾಗಿ ಆಯ್ಕೆ ಮಾಡಲಾಯಿತು. ನಗರದ 42 ಮೊಹಲ್ಲಾದ ನಾಯಕರು ಅವರನ್ನು ಖಾಝಿಯಾಗಿ ಸ್ವೀಕರಿಸಿದರು.

ಮೈಸೂರು, ಕೆ.ಜಿ.ಎಫ್, ಹೊಸೂರು, ರಾಮನಗರ, ತುಮಕೂರಿನ ಕೆಲ ಮೊಹಲ್ಲಾದ ‍ಪ್ರತಿನಿಧಿಗಳೂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್‌) ಅವರನ್ನು ಖಾಝಿಯಾಗಿ ಸ್ವೀಕರಿಸಿದರು. ಉಳ್ಳಾಲ ಖಾಝಿಗಳಾಗಿದ್ದ ಮರ್‌ಹೂಂ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅವರ ಅನುಸ್ಮರಣೆ ಕಾರ್ಯಕ್ರಮದಲ್ಲಿ ಖಾಝಿ ಸ್ವೀಕಾರ ಪ್ರಕ್ರಿಯೆ ನಡೆಯಿತು.

‘ವಯನಾಡ್‌ನಲ್ಲಿ ನಡೆದ ಪ್ರಕೃತಿ ದುರಂತದಲ್ಲಿ ಉಂಟಾದ ನಷ್ಟವು ಊಹಿಸಲು ಅಸಾಧ್ಯವಾಗಿದೆ. ನಿರಾಶ್ರಿತರಿಗೆ ಕೈಲಾಗುವ ಸಹಾಯ ಮಾಡಬೇಕು’ ಎಂದು ಎ.ಪಿ. ಉಸ್ತಾದ್‌ ತಿಳಿಸಿದರು.

ಸೈಯದ್ ಇಬ್ರಾಹಿಂ ಬಾಫಖಿ ತಂಙಳ್, ಹುಸೈನ್ ಸಖಾಫಿ ಚುಳ್ಳಿಕೋಡ್, ಸೈಯದ್ ತನ್ವೀರ್ ಹಾಶಿಮಿ, ಎನ್.ಕೆ.ಎಂ. ಶಾಫಿ ಸ‌ಅದಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಹಫೀಳ್ ಸ‌ಅದಿ, ಎಸ್‌ಎಸ್‌ಎಫ್‌ ರಾಜ್ಯ ಘಟಕದ ಅಧ್ಯಕ್ಷ ಸುಫಿಯಾನ್ ಸಖಾಫಿ, ಮುಸ್ಲಿಂ ಜಮಾ‌ತ್ ಜಿಲ್ಲಾ ಘಟಕದ ಅಧ್ಯಕ್ಷ ಶಬೀರ್ ಹಝರತ್, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷ, ಮಾಜಿ ಸಚಿವ ರೋಷನ್ ಬೇಗ್, ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮುಹಮ್ಮದಲಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌, ಜಿ.ಎ. ಬಾವ, ಯು.ಟಿ. ಇಫ್ತಿಕಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT