ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮಣಶ್ರೀ ಶರಣ ಪ್ರಶಸ್ತಿಗೆ ಅರ್ಜಿ ಆಹ್ವಾನ

Published : 13 ಆಗಸ್ಟ್ 2024, 15:29 IST
Last Updated : 13 ಆಗಸ್ಟ್ 2024, 15:29 IST
ಫಾಲೋ ಮಾಡಿ
Comments

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ ‘ರಮಣಶ್ರೀ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ, ಶರಣ ಸಾಂಸ್ಕೃತಿಕ ಪ್ರಸಾರ ಮತ್ತು ಸೇವಾ ಸಂಸ್ಥೆ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಹಿರಿಯ ಶ್ರೇಣಿ ಮತ್ತು ಉತ್ತೇಜನ ಶ್ರೇಣಿಯಲ್ಲಿ ತಲಾ ನಾಲ್ಕು ರಮಣಶ್ರೀ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಉತ್ತೇಜನ ಶ್ರೇಣಿ ಪ್ರಶಸ್ತಿಗೆ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. 

ಹಿರಿಯ ಶ್ರೇಣಿ ಪ್ರಶಸ್ತಿಯು ತಲಾ ₹40 ಸಾವಿರ ಹಾಗೂ ಉತ್ತೇಜನ ಶ್ರೇಣಿ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ. ಆಸಕ್ತರು ಆಗಸ್ಟ್‌ 31ರೊಳಗೆ ಅರ್ಜಿ ಸಲ್ಲಿಸಬೇಕು.

ವಿಳಾಸ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು–560070, ಅಥವಾ ಎಸ್. ಷಡಕ್ಷರಿ, ಅಧ್ಯಕ್ಷರು, ರಮಣಶ್ರೀ ಪ್ರತಿಷ್ಠಾನ, ನಂ. 16, ರಾಜಾರಾಮ ಮೋಹನ್‌ ರಾಯ್ ರಸ್ತೆ, ಬೆಂಗಳೂರು–560025. ಮಾಹಿತಿಗೆ: 98450 32813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT