ಬುಧವಾರ, ಆಗಸ್ಟ್ 21, 2019
27 °C

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಸಂಯುಕ್ತ ಸ್ವಕುಳಸಾಳಿ ಸಂಘವು ‘ಭಗವಾನ್ ಜಿಹೇಶ್ವರ ಜಯಂತಿ’ಯನ್ನು ನಗರದ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿಹಬ್ಬದ ಭವನದಲ್ಲಿ ಆ.13ಕ್ಕೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಘವು ಪ್ರತಿಭಾ ಪುರಸ್ಕಾರ ನೀಡಲು ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಹಾಗೂ ಪದವಿಯಲ್ಲಿ ಶೇ 60ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಅರ್ಹ ಅಭ್ಯರ್ಥಿಗಳು ಅರ್ಜಿಯ ಪ್ರತಿ ಹಾಗೂ ದಾಖಲೆಗಳನ್ನು ಆ. 10ರೊಳಗೆ ಡಾ. ಗಿರಿಧರ ಗಾಯಕ್‌ವಾಡ್‌, 203, ಬ್ಲೂ ಸ್ಕೈ, ಎಂ.ಕೆ. ರೆಸಿಡೆನ್ಸಿ, ಆಂಜನೇಯ ಗುಡಿ ಬೀದಿ, ಉತ್ತರಹಳ್ಳಿ, ಬೆಂಗಳೂರು-560061 ಈ ವಿಳಾಸಕ್ಕೆ ಕಳುಹಿಸುವಂತೆ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

Post Comments (+)