ಶನಿವಾರ, ಜುಲೈ 31, 2021
25 °C
ಸರ್ಕಾರಿ ಪದವಿ ಕಾಲೇಜು–ಹಣಕಾಸು ಇಲಾಖೆಯ ಅನುಮತಿ ವಿಳಂಬ ಸಾಧ್ಯತೆ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ನಿಯಮ ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಅಂತಿಮ ನಿಯಮ ರೂಪಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

100 ಅಂಕಗಳ ಕನ್ನಡ ಪತ್ರಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸಾಮಾನ್ಯ ವರ್ಗದವರ ವಯೋಮಿತಿಯನ್ನು 40 ವರ್ಷಗಳಿಗೆ ನಗದಿಪಡಿಸಲಾಗಿದೆ. ಉಳಿದಂತೆ ಬಹುಮಟ್ಟಿಗೆ ಕರಡು ನಿಯಮಗಳಲ್ಲಿನ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ.

ಬಹುತೇಕ ಆಕ್ಷೇಪಣೆಗಳನ್ನು ಸೇರಿಸಿಕೊಂಡು ಅಂತಿಮ ನಿಮಯ ರೂಪಿಸಲಾಗಿದ್ದು, ಸರ್ಕಾರ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಟಿ.ಎಂ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.