ಶನಿವಾರ, ಏಪ್ರಿಲ್ 4, 2020
19 °C

ಕೋವಿಡ್‌–19: ಮಾರ್ಗಸೂಚಿ ಹೊರಡಿಸಿದ ಆರ್ಚ್‌ಬಿಷಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಾದ್ಯಂತ ಕೋವಿಡ್‌–19 ಕುರಿತು ಭೀತಿ ಹೆಚ್ಚಿರುವ ಹಿನ್ನೆಲೆ, ರಾಜ್ಯದ ಬಿಷಪ್‌ಗಳ ಪರವಾಗಿ ಬೆಂಗಳೂರಿನ ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದಾರೆ. 

ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ‘ಸಾಂಕ್ರಾಮಿಕ ರೋಗಗಳು ಹಾಗೂ ಇಂತಹ ವೈರಸ್‌ಗಳಿಂದ ಸಾವಿರಾರು ಜನ ಈ ಹಿಂದೆ ಸಾವಿಗೀಡಾಗಿದ್ದಾರೆ. ಆದರೆ ಆ ಎಲ್ಲ ರೋಗ ಅಥವಾ ವೈರಸ್‌ಗಳು ಕೊರೊನಾ ಸೋಂಕಿನಷ್ಟು ಆತಂಕ ಸೃಷ್ಟಿಸಿರಲಿಲ್ಲ. ವೈರಸ್‌ಗಿಂತ, ಅದರ ಬಗೆಗಿನ ಭೀತಿ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತದೆ’ ಎಂದು ಆರ್ಚ್‌ಬಿಷಪ್‌ ಹೇಳಿದ್ದಾರೆ. 

ಆರ್ಚ್‌ಬಿಷಪ್‌ ಸಲಹೆಗಳು

*ಪವಿತ್ರ ನೀರಿನಿಂದ ಚರ್ಚ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು

*ಪವಿತ್ರ ನೀರಿನ ಬಳಕೆ ಬಗ್ಗೆ ಆಯಾ ಚರ್ಚ್‌ಗಳು ತಮ್ಮ ವಿವೇಚನೆ ಬಳಸಬಹುದು

*ಪಾದ್ರಿಗಳು ಪ್ರಾರ್ಥನೆ ಸಲ್ಲಿಸುವ ಮೊದಲು ಮತ್ತು ನಂತರ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು

*ಶಿಲುಬೆ ಅಥವಾ ಜಪಮಣಿಗೆ (ರೋಸರಿ) ಮುತ್ತಿಕ್ಕಿ ನಮಿಸಬಾರದು. ಬದಲಾಗಿ, ಶಿಲುಬೆಗೆ ಬಾಗಿ ನಮಸ್ಕರಿಸಬಹುದು

*ಬಿಷಪ್‌ರ ಆಶೀರ್ವಾದ ಪಡೆಯಲು ಬಯಸುವವರು, ಅವರ ಉಂಗುರಕ್ಕೆ ಚುಂಬಿಸಿ ನಮಸ್ಕರಿಸುವುದು ಬೇಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು