ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ: ಸ್ವಚ್ಛ ಸಂಕೀರ್ಣ ಘಟಕದ ಕಾರ್ಯವೈಖರಿಗೆ ಮೆಚ್ಚುಗೆ

ಅರೆಕೆರೆ ಘಟಕಕ್ಕೆ ಬ್ರಿಟಿಷ್‌ ಡೆಪ್ಯುಟಿ ಹೈ ಕಮಿಷನರ್‌ ನಿಯೋಗ ಭೇಟಿ
Published : 11 ಸೆಪ್ಟೆಂಬರ್ 2024, 15:38 IST
Last Updated : 11 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಯಲಹಂಕ: ಬ್ರಿಟಿಷ್‌ ಡೆಪ್ಯುಟಿ ಹೈ ಕಮಿಷನರ್‌(ಕರ್ನಾಟಕ ಮತ್ತು ಕೇರಳ) ಚಂದ್ರಶೇಖರ್‌ ಅಯ್ಯರ್‌ ನೇತೃತ್ವದ ನಿಯೋಗ, ಅರಕೆರೆ ಗ್ರಾಮದಲ್ಲಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿತು.

ಘಟಕದ ಹಸಿ-ಒಣ ಕಸ ವಿಂಗಡಣಾ ವಿಭಾಗ, ಮೀನು ಸಾಕಾಣಿಕೆ ಹೊಂಡ, ಮಳೆನೀರು ಸಂಗ್ರಹ, ಔಷಧಿ ಸಸ್ಯಗಳ ಧನ್ವಂತ್ರಿವನ, ಸಾವಯವ ಗೊಬ್ಬರ ತಯಾರಿಕೆ ವಿಭಾಗಗಳನ್ನು ಗಮನಿಸಿದರು. ಘಟಕದ ನಿರ್ವಹಣೆ, ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷವಾಗಿ ಕಸದ ವಾಹನ ಚಾಲನೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದರ ಬಗ್ಗೆ ಪ್ರಶಂಸಿಸಿದರು. ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಘಟಕದ ಅಭಿವೃದ್ಧಿಗಾಗಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ರಾಜಾನುಕುಂಟೆಯ ಡಿಜಿಟಲ್‌ ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ನಿಯೋಗ, ಗ್ರಂಥಾಲಯದಲ್ಲಿ ಅಳವಡಿಸಿರುವ ಅತ್ಯಾಧುನಿಕ ಸೌಲಭ್ಯಗಳು, ವ್ಯವಸ್ಥಿತ ನಿರ್ವಹಣೆ, ಸಾರ್ವಜನಿಕರಿಂದ ಬಳಕೆ ಹಾಗೂ ಕಾರ್ಯಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಬ್ರಿಟಿಷ್‌ ಡೆಪ್ಯುಟಿ ಹೆಡ್‌ ಆಫ್‌ ಮಿಷನ್‌ನ ಜೇಮ್ಸ್ ಗಾಡ್‌ಬೇರ್‌, ಇಂಡಿಯಾ ಬ್ರಿಟಿಷ್‌ ಕೌನ್ಸಿಲ್‌ನ ನಿರ್ದೇಶಕರಾದ ಅಲಿಸನ್‌ ಬ್ಯಾರೆಟ್‌, ದಕ್ಷಿಣ ಭಾರತ ಬ್ರಿಟಿಷ್‌ ಕೌನ್ಸಿಲ್‌ನ ನಿರ್ದೇಶಕರಾದ ಜನಕಾ ಪುಷ್ಪನಾಥನ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಉಮಾ ಮಹದೇವನ್‌, ಆಯುಕ್ತರಾದ ಅರುಂದತಿ ಚಂದ್ರಶೇಖರ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಲತಾಕುಮಾರಿ, ಉಪಕಾರ್ಯದರ್ಶಿ ಅನಿತಾ ಮತ್ತಿತರರು ನಿಯೋಗದಲ್ಲಿದ್ದರು.

ಯಲಹಂಕ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧು, ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಸತೀಶ್‌ ಕಡತನಮಲೆ, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಚನ್ನಮ್ಮ, ಆಂಜಿನಮ್ಮ ಚೌಡಪ್ಪ, ಉಪಾಧ್ಯಕ್ಷರಾದ ಕೆ.ಎಂ.ಅರಸೇಗೌಡ, ವೆಂಕಟೇಶ್‌, ಮಾಜಿ ಅಧ್ಯಕ್ಷರಾದ ಕೆ.ಆರ್‌.ತಿಮ್ಮೇಗೌಡ, ಬಿ.ಸಿ.ಶಶಿಕುಮಾರ್‌, ಎಸ್‌.ಜಿ.ನರಸಿಂಹಮೂರ್ತಿ, ಮಾಜಿ ಉಪಾಧ್ಯಕ್ಷರಾದ ಪದ್ಮ ಮುನಿಕೃಷ್ಣಪ್ಪ, ನೇತ್ರಾವತಿ ಅಂಬರೀಶ್‌ ಬಾಬು, ಶಿಲ್ಪಾ ರಾಜಣ್ಣ, ಪಿಡಿಒಗಳಾದ ನಾಗರಾಜ್‌, ತಿಮ್ಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT