ಶನಿವಾರ, ಜನವರಿ 29, 2022
19 °C

ಸೈಕಲ್‌ನಲ್ಲಿ ಹೋಗುತ್ತಿದ್ದ ಸೇನಾಧಿಕಾರಿಯ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸೈಕಲ್‌ನಲ್ಲಿ ಸಾಗುತ್ತಿದ್ದ  ಸೇನಾಧಿಕಾರಿಯೊಬ್ಬರನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಭಾರತೀಯ ವಾಯು ಸೇನೆಯಲ್ಲಿ ಸಾರ್ಜಂಟ್ ಆಗಿರುವ ವೈಶಾಖ್ ಅವರು ಸುಲಿಗೆ ಬಗ್ಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಲಸೂರಿನ ಸರಸ್ವತಿಪುರದಲ್ಲಿ ವಾಸವಿರುವ ವೈಶಾಖ್, ತಮ್ಮ ಮನೆ ಯಿಂದ ಡಿಸೆಂಬರ್ 3ರಂದು ಬೆಳಿಗ್ಗೆ 5.20ರ ಸುಮಾರಿಗೆ ಸೈಕ್ಲಿಂಗ್‌ಗೆ ಹೊರಟಿದ್ದರು. ಉಪ್ಪಾರಪೇಟೆ ಠಾಣೆ ವ್ಯಾಪ್ತಿಯ ಕೆ.ಜಿ. ರಸ್ತೆಯಲ್ಲಿರುವ ಪೋತಿಸ್ ಬಟ್ಟೆ ಮಾರಾಟ ಮಳಿಗೆ ಬಳಿ 5.40ರ ಸುಮಾರಿಗೆ ಸೈಕಲ್‌ನಲ್ಲಿ ಬಂದಿದ್ದರು.’

‘ಅವರನ್ನು ಹಿಂಬಾಲಿಸಿದ್ದ ಆರೋಪಿಯೊಬ್ಬ ಮಾರ್ಗಮಧ್ಯೆಯೇ ಸೈಕಲ್‌ ತಳ್ಳಿ ಬೀಳಿಸಿದ್ದ. ಮತ್ತೊಬ್ಬ, ಅವರ ಮೊಬೈಲ್ ಕಿತ್ತುಕೊಂಡಿದ್ದ. ನಂತರ, ಇಬ್ಬರೂ ಸ್ಥಳದಿಂದ ಓಡಿಹೋಗಿದ್ದಾರೆ. ಘಟನೆಯಿಂದ ವೈಶಾಖ್ ಅವರ ಬಲಗಾಲು
ಹಾಗೂ ಮುಖಕ್ಕೆ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು