ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಮುಖಕ್ಕೆ ಉಗಿದು ದುರ್ವರ್ತನೆ ತೋರಿದ್ದ ಆಟೊ ಚಾಲಕನ ಬಂಧನ

Published : 8 ಆಗಸ್ಟ್ 2024, 15:35 IST
Last Updated : 8 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಬೆಂಗಳೂರು: ಮಾರತ್‌ಹಳ್ಳಿಯ ಯಮಲೂರು ಸಿಗ್ನಲ್‌ ಬಳಿ ಕಾರು ಚಾಲಕನ ಮುಖಕ್ಕೆ ಉಗಿದು ದುರ್ವತನೆ ತೋರಿದ್ದ ಆರೋಪದಡಿ ಆಟೊ ಚಾಲಕನನ್ನು ಎಚ್‌ಎಎಲ್‌ ಠಾಣಾ ಪೊಲೀಸರು ಬಂಧಿಸಿ, ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಯಮಲೂರಿನ ಕಿರಣ್ (34) ಬಂಧಿತ.

‘ಆಗಸ್ಟ್‌ 5ರಂದು ಮಾರತ್‌ಹಳ್ಳಿ ಜಂಕ್ಷನ್‌ನ ಸಿಗ್ನಲ್‌ ಬಳಿ ಕಾರಿನಲ್ಲಿ ದೂರುದಾರ ಅಲೆಕ್ಸ್‌ ಬಾಬಿ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಕಿರಣ್‌ ಆಟೊದಲ್ಲಿ ಬರುತ್ತಿದ್ದರು. ಮುಂದೆ ಸಾಗಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಆಟೊ ಚಾಲಕ ಗಲಾಟೆ ನಡೆಸಿ, ಕಾರಿನ ಮಿರರ್‌ಗೆ ಹೊಡೆದು ದುರ್ವತನೆ ತೋರಿದ್ದ. ಅಲ್ಲದೇ ಚಾಲಕನ ಮುಖಕ್ಕೆ ಉಗಿದು ಬೆದರಿಕೆ ಹಾಕಿದ್ದ. ಕಾರಿನಲ್ಲಿದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಆ ವಿಡಿಯೊ ಹಂಚಿಕೊಂಡು, ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು‘ ಎಂದು ಮೂಲಗಳು ತಿಳಿಸಿವೆ.

‘ವಿಡಿಯೊ ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT