‘ಹಿಂಸೆ ಮುಕ್ತ ಸಮಾಜ ಮಾನವ ಜನ್ಮಸಿದ್ಧ ಹಕ್ಕು’

7

‘ಹಿಂಸೆ ಮುಕ್ತ ಸಮಾಜ ಮಾನವ ಜನ್ಮಸಿದ್ಧ ಹಕ್ಕು’

Published:
Updated:

ಬೆಂಗಳೂರು: ‘ಹಿಂಸೆ ಮುಕ್ತ ಸಮಾಜ, ದಮನ ಮುಕ್ತ ಬುದ್ಧಿಮತ್ತೆ, ಆಘಾತ ಮುಕ್ತ ನೆನಪು ಮತ್ತು ದುಃಖ ಮುಕ್ತ ಆತ್ಮ ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು’ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀರವಿಶಂಕರ್‌ ಹೇಳಿದರು.

ನಗರದ ಆರ್ಟ್‌ ಆಫ್‌ ಲಿವಿಂಗ್‌ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಗಾಂಧಿ ಜಯಂತಿ ಅಂಗವಾಗಿ ‘ಹಿಂಸೆಯ ವಿರುದ್ಧ ವಿಶ್ವ ಶೃಂಗಸಭೆ’ಯಲ್ಲಿ ಅವರು ಮಾತನಾಡಿ, ಗಾಂಧಿಯವರ ಅಹಿಂಸೆ, ಶಾಂತಿಯ ತತ್ವಗಳ ಮಾರ್ಗದಲ್ಲಿ ನಡೆಯುವುದರಿಂದ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಇಂದಿನ ಯುವ ಜನಾಂಗದಲ್ಲಿ ಆಕ್ರಮಣಕಾರಿ ಮನೋಭಾವ ಹೆಚ್ಚುತ್ತಿದೆ. ಅತಿ ಬೇಗನೆ ಸಹನೆ ಕಳೆದುಕೊಳ್ಳುವುದು ಫ್ಯಾಷನ್‌ ಆಗಿದೆ. ಚಲನಚಿತ್ರ ಮತ್ತು ಮಾಧ್ಯಮಗಳ ಪ್ರಭಾವದಿಂದ ಇಂತಹ ವರ್ತನೆ ಹೆಚ್ಚಾಗುತ್ತಿದೆ. ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಇಲ್ಲದೇ ಇದ್ದಾಗಲೇ ಆಕ್ರಮಣಕಾರಿ ಮನೋಭಾವ ಇಣುಕು ಹಾಕುತ್ತದೆ. ಅಂತಿಮವಾಗಿ ಖಿನ್ನತೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.

ಶೃಂಗ ಸಭೆಯಲ್ಲಿ ವಿಶ್ವದ 30 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಜಗತ್ತು ಎದುರಿಸುತ್ತಿರುವ ಸಂಘರ್ಷಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !