ಬೆಂಗಳೂರು: ‘ಮನುಷ್ಯರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಅಶ್ವಗಂಧ ಸಸ್ಯದ ಎಲೆಗಳು ಅಥವಾ ಅದರ ಸಾರವನ್ನು ಆಹಾರ ಪದಾರ್ಥಗಳಲ್ಲಿ ಬಳಸಬಾರದು’ ಎಂಬ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದ (ಎಫ್ಎಸ್ ಎಸ್ಎಐ) ಸಲಹೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ಎಫ್ಎಸ್ಎಸ್ಎಐ’ ಸಲಹಾ ಸಂವಹನವನ್ನು ಪ್ರಶ್ನಿಸಿ ಅಮೆರಿಕದ ‘ಕೆರ್ರಿ ಇಂಕ್’ ಕಂಪನಿಯ ಬೆಂಗಳೂರು ಶಾಖೆ ಸೇರಿದಂತೆ ಭಾರತದ ವಿವಿಧೆಡೆ ಇರುವ ಒಟ್ಟು 8 ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಎಫ್ಎಸ್ಎಸ್ಎಐ ಹೊರಡಿಸಿರುವ ಸಲಹಾ ಪ್ರಕಟಣೆಗೆ ನೀಡಲಾಗುತ್ತಿರುವ ಮಧ್ಯಂತರ ತಡೆ ಆದೇಶ ಅರ್ಜಿದಾರರಿಗೆ ಮುಂದಿನ ವಿಚಾರಣೆವರೆಗೆ ಮಾತ್ರ ಸೀಮಿತವಾಗಿದೆ’ ಎಂದು ಇದೇ ವೇಳೆ ಸ್ಪಷ್ಟಪಡಿಸಿರುವ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ, ‘ಎಫ್ಎಸ್ಎಸ್ಎಐ’ಗೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದೆ.

ಕೋರಿಕೆ

'ಆಹಾರ ಸುರಕ್ಷತೆ ಮತ್ತು ನಿಯಮ ಗಳು-2016ರ ಅಡಿಯಲ್ಲಿನ ಮಾನದಂಡಗಳ ಪ್ರಕಾರವೇ ಅಶ್ವಗಂಧದ ಎಲೆಗಳು ಸೇರಿದಂತೆ ಅದರ ಸಸ್ಯದ ಬೇರುಗಳು ಮತ್ತು ಸಾರಗಳಿರುವ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಈವರೆಗೆ ಯಾವುದೇ ಗಂಭೀರ ಸುರಕ್ಷತಾ ಸಮಸ್ಯೆಗಳು ಕಂಡುಬಂದಿಲ್ಲ' ಎಂಬುದು ಅರ್ಜಿದಾರರ ಆಕ್ಷೇಪ.

'ಎಫ್ಎಸ್ಎಸ್ಎಐ 2026ರ ಏಪ್ರಿಲ್ 16ರಂದು ಹೊರಡಿಸಿರುವ ಸಲಹೆ ಮತ್ತು ಕೇಂದ್ರ ಸರ್ಕಾರಕ್ಕೆ ಒದಗಿಸಿರುವ ಸಂವಹನ ಪತ್ರ, ಸಂವಿಧಾನದ 19(1)(ಜಿ) ವಿಧಿಗೆ ವಿರುದ್ಧವಾಗಿದ್ದು ಇದನ್ನು ರದ್ದು ಪಡಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-243542923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.