ಮಂಗಳವಾರ, ಡಿಸೆಂಬರ್ 1, 2020
20 °C

‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿದ್ದ ಗುಂಪೊಂದು ಗುತ್ತಿಗೆದಾರ ವಿ.ಟಿ. ತಿಲಕ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅ. 31ರಂದು ರಾತ್ರಿ ಈ ಘಟನೆ ನಡೆದಿದೆ. ಗಾಯಾಳು ತಿಲಕ್‌ ನೀಡಿರುವ ದೂರು ಆಧರಿಸಿ ಆರೋಪಿಗಳಾದ ಅಕ್ಷತ್ ಜೈನ್, ಜೆ. ಕೊಠಾರಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ತಿಲಕ್ ಹಾಗೂ ಸ್ನೇಹಿತರು, ಠಾಣೆ ವ್ಯಾಪ್ತಿಯ ಪಬ್‌ವೊಂದಕ್ಕೆ ಹೋಗಿದ್ದರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುತ್ತಿದ್ದರು. ಅವರನ್ನು ಗುರಾಯಿಸಿದ್ದ ಆರೋಪಿಗಳು, ಹತ್ತಿರ ಬಂದು ನಿಂದಿಸಿದ್ದರು. ‘ನೀವು ಬೆಂಗಳೂರಿನವರಾ’ ಎಂದು ದೂರುದಾರ ಕೇಳಿದ್ದರು. ‘ನಾವು ಪಾಕಿಸ್ತಾನದವರು’ ಎಂದು ಹೇಳಿ ಕೂಗಾಡಿದ್ದ ಆರೋಪಿಗಳು, ಅಲ್ಲಿಂದ ಹೊರಟು ಹೋಗಿದ್ದರು.’

‘ಕೆಲ ಸಮಯದ ನಂತರ ಪಬ್‌ನ ಕೊಠಡಿಯೊಂದರಲ್ಲಿ ತಿಲಕ್ ನಿಂತಿದ್ದರು. ಅಲ್ಲಿಗೆ ಹೋದ ಆರೋಪಿಗಳು, ಅವರ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಟೀ ಶರ್ಟ್ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು