ಆತ್ಮಹತ್ಯೆಗೆ ಯತ್ನಿಸಿದ ಎಎಸ್‌ಐ

7

ಆತ್ಮಹತ್ಯೆಗೆ ಯತ್ನಿಸಿದ ಎಎಸ್‌ಐ

Published:
Updated:

ಬೆಂಗಳೂರು: ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಎಎಸ್‌ಐ ನಾಗಲಕ್ಕಣ್ಣ ಗೌಡ ಎಂಬುವರು ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮೈಕೊ ಲೇಔಟ್ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಅವರು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದೇ ಕಾರಣಕ್ಕಾಗಿ ವರ್ಗಾವಣೆ ಕೋರಿ ಸಹಾಯಕ ಆಡಳಿತಾಧಿಕಾರಿಗೆ ಹಲವು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಸಿಗದಿದ್ದರಿಂದ ನೊಂದಿದ್ದರು ಎನ್ನಲಾಗಿದೆ.

‘ವರ್ಗಾವಣೆ ಬಗ್ಗೆ ವಿಚಾರಿಸಲೆಂದು ನಾಗಲಕ್ಕಣ್ಣ, ಕೇಂದ್ರಕ್ಕೆ ಬುಧವಾರ ಬಂದಿದ್ದರು. ಮನವಿಯ ಪ್ರಗತಿ ಬಗ್ಗೆ ಸಹಾಯಕ ಆಡಳಿತಾಧಿಕಾರಿಯನ್ನು ಕೇಳಿದ್ದರು. ಸಮರ್ಪಕ ಉತ್ತರ ಸಿಗದಿದ್ದಾಗ, ಕೊಠಡಿಯೊಂದಕ್ಕೆ ಹೋಗಿ 10 ಮಾತ್ರೆಗಳನ್ನು ನುಂಗಿ ಮಲಗಿದ್ದರು. ಅವರನ್ನು ಗಮನಿಸಿದ ಕೇಂದ್ರದ ಸಿಬ್ಬಂದಿ, ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಕೇಂದ್ರದ ಮೂಲಗಳು ತಿಳಿಸಿವೆ.

ಡಿಸಿಪಿ ಅನುಪಮ್ ಅಗರವಾಲ್, ‘ಘಟನೆ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ. ಎಎಸ್‌ಐ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅವರು ಗುಣಮುಖರಾದ ಬಳಿಕ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !