ಬೆಂಗಳೂರು: ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಕಾನ್ಸ್ಟೆಬಲ್ ಎಂ.ವಿ. ಸೋಮಶೇಖರ್ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫೆ. 15ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಸೋಮಶೇಖರ್ ದೂರು ನೀಡಿದ್ದಾರೆ. ಬೈಕ್ ಸವಾರ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸಿಟಿ ಮಾರ್ಕೆಟ್ ಠಾಣೆ ಕಾನ್ಸ್ಟೆಬಲ್ ಸೋಮಶೇಖರ್, ಕೆಲಸ ಮುಗಿಸಿ ಮಫ್ತಿಯಲ್ಲಿ ಕಾರಿನಲ್ಲಿ ಮನೆಯತ್ತ ಹೊರಟಿ
ದ್ದರು. ಮಸ್ಕಾನ್ ದರ್ಗಾ ಬಳಿಯ ರಸ್ತೆ ಮಧ್ಯೆ ರಾಯಲ್ ಎನ್ಫೀಲ್ಡ್ ಬೈಕ್ ನಿಲ್ಲಿಸಿದ್ದ ಸವಾರ, ಅದರ ಮೇಲೆ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ದಟ್ಟಣೆ ಉಂಟಾಗಿತ್ತು’ ಎಂದರು.

‘ಸವಾರನಿಗೆ ಬುದ್ಧಿವಾದ ಹೇಳಿದ್ದ ಕಾನ್ಸ್ಟೆಬಲ್, ‘ಬೈಕ್ನಿಂದ ಇತರರಿಗೆ ತೊಂದರೆ ಆಗುತ್ತಿದೆ. ಬೈಕ್ ಅನ್ನು ಪಕ್ಕಕ್ಕೆ ನಿಲ್ಲಿಸು’ ಎಂದಿದ್ದರು. ಕೋಪಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಸವಾರನ ಸ್ನೇಹಿತರು ಸ್ಥಳಕ್ಕೆ ಬಂದಿದ್ದರು.’

‘ಸವಾರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದರು. ‘ನಮ್ಮ ಏರಿಯಾಗೆ ಬಂದು ನಮಗೇ ಬುದ್ಧಿ
ಹೇಳುತ್ತಿಯಾ ?’ ಎಂದು ಉರ್ದುವಿನಲ್ಲಿ ಬೈದಿದ್ದರು. ‘ಸಾಯುವವರೆಗೂ ಹೊಡೆಯಿರಿ’ ಎಂದು ಮತ್ತೊಬ್ಬ ಹೇಳಿದ್ದ. ಒಬ್ಬಾತ,
ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಪ್ರತಿರೋಧವೊಡ್ಡಿದ್ದ ಕಾನ್ಸ್ಟೆಬಲ್, ಆತನ ಕೈ ಬಿಡಿಸಿಕೊಂಡಿದ್ದರು’ ಎಂದರು.

‘ಕೆಳಗೆ ಬಿದ್ದ ಕಾನ್ಸ್ಟೆಬಲ್ ಅವರಿಗೆ ಆರೋಪಿಗಳು ಕಾಲಿನಿಂದ ಒದ್ದಿದ್ದರು. ‘ನಾನು ಪೊಲೀಸ್’ ಎಂದು ಹೇಳಿದರೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಕಾನ್ಸ್ಟೆಬಲ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಕೊಲೆಗೆ ಯತ್ನಿಸಿರುವ ಆರೋಪಿಗಳು, ಕಾರಿನಲ್ಲಿದ್ದ ₹ 8,000 ನಗದುಕದ್ದೊಯ್ದಿದ್ದಾರೆ’ ಎಂದು ಕಾನ್ಸ್ಟೆಬಲ್ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಠಾಣೆಯಲ್ಲಿರದ ಸಿಬ್ಬಂದಿ: 45 ನಿಮಿಷ ಕಾದ ದೂರುದಾರ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರಿಂದ ದೂರುದಾರರೊಬ್ಬರು 45 ನಿಮಿಷ ಕಾದು ಮನೆಗೆ ವಾಪಸು ಹೋಗಿದ್ದು, ಪೊಲೀಸರ ಈ ವರ್ತನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿ ಮಂಜುನಾಥ್ ಎಂಬುವವರು ತಮ್ಮ ಸೈಕಲ್ ಕಳವಾದ ಬಗ್ಗೆ ದೂರು ನೀಡಲು ಶುಕ್ರವಾರ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಎಲ್ಲ ಕುರ್ಚಿಗಳು ಖಾಲಿ ಇದ್ದವು. ಠಾಣಾಧಿಕಾರಿ ಸಹ ಹೊರಗಡೆ ಹೋಗಿದ್ದರು.

ಸಿಬ್ಬಂದಿ ಬರಬಹುದೆಂದು ಕಾದು ತಾಳ್ಮೆ ಕಳೆದುಕೊಂಡ ಮಂಜುನಾಥ್, ದೂರು ನೀಡುವುದೇ ಬೇಡವೆಂದು ಹತಾಶೆಯಿಂದ ಮನೆಗೆ ವಾಪಸು ತೆರಳಿದ್ದರು. ತಮಗಾದ ಅನುಭವವನ್ನು ಟ್ವೀಟ್ ಮಾಡಿರುವ ಮಂಜುನಾಥ್, ‘ದೇವರೇ ನಮ್ಮನ್ನು ರಕ್ಷಿಸು’ ಎಂದಿದ್ದಾರೆ.

ಮಂಜುನಾಥ್ ಟ್ವೀಟ್ ಹಂಚಿಕೊಂಡಿರುವ ಹಲವರು, ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. ‘ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ, ಜನರ ದೂರು ಪಡೆಯುವವರು ಯಾರು. ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

ಠಾಣೆಗೆ ಕರೆಸಿ ದೂರು ಸ್ವೀಕಾರ: ಟ್ವೀಟ್ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಮಂಜುನಾಥ್ ಅವರನ್ನು ಶನಿವಾರ ಠಾಣೆಗೆ ಕರೆಸಿ ದೂರು ಸ್ವೀಕರಿಸಿದ್ದಾರೆ. ಎಫ್ಐಆರ್ ಸಹ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಮಂಜುನಾಥ್, ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.