ಬೆಂಗಳೂರು: ‘ನಮ್ಮ ತಂದೆಯವರು ಪುಣೆಯಲ್ಲಿ ಉದ್ದಿಮೆದಾರರಾಗಿ ಹತ್ತಾರು ಜನರಿಗೆ ಅನ್ನ ನೀಡುವವರಾಗಿದ್ದರು. 1948ರ ನರಮೇಧದಿಂದಾಗಿ ಎಲ್ಲವನ್ನು ಕಳೆದುಕೊಂಡು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು’ ಎಂದು ಲೇಖಕಿ ವಿಜಯಾ ವಿಷ್ಣುಭಟ್ ಡೋಂಗ್ರೆ ತಿಳಿಸಿದರು.

ಅವರು ರಚಿಸಿದ ‘1948 ಬ್ರಾಹ್ಮಣರ ನರಮೇಧ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಸ್ವ ಅನುಭವ ವಿವರಿಸಿದರು.

‘ಮಹಾತ್ಮ ಗಾಂಧೀಜಿಯವರ ಹತ್ಯೆ ಆದಾಗ ಚಿತ್ಪಾವನ ಬ್ರಾಹ್ಮಣರನ್ನು ಹುಡುಕಿ ಹುಡುಕಿ ಹಿಂಸೆ ನೀಡಲಾಯಿತು. ಹತ್ಯೆ ಮಾಡಲಾಯಿತು. ನನ್ನ ಒಂದು ಕುಟುಂಬವಲ್ಲ, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದವು. ನಮ್ಮ ಕುಟುಂಬ ಅನ್ನ ಅರಸಿ 1950ರಲ್ಲಿ ಕರ್ನಾಟಕಕ್ಕೆ ಬಂತು’ ಎಂದು ಹೇಳಿದರು.

‘ಸಂತ್ರಸ್ತ ಕುಟುಂಬದಿಂದ ಬಂದು ಬದುಕು ಅತಂತ್ರವಾಗಿದ್ದರೂ ಯಾರ ಮುಂದೆಯೂ ಕೈಚಾಚದೇ ಸ್ವಾಭಿಮಾನದಿಂದ ಜೀವಿಸಿ ತೋರಿಸಿದ್ದೇವೆ’ ಎಂದರು.

ವಕೀಲ ವಿಕ್ರಮ ಫಡಕೆ ಮಾತನಾಡಿ, ‘1948 ಬ್ರಾಹ್ಮಣರ ನರಮೇಧ ಕೃತಿಯಲ್ಲಿರುವ ಘಟನೆಗಳು ಮನಕಲಕುವಂತಿವೆ. ಅವು ಆಕಸ್ಮಿಕವಾಗಿರದೇ ಸಂಘಟಿತ ಸಂಚು ಆಗಿತ್ತು. ಇಂಥ ಸತ್ಯ ಇತಿಹಾಸಗಳನ್ನು ಮುಚ್ಚಿ ಹಾಕಲಾಗಿತ್ತು. ಅವುಗಳನ್ನು ಲೋಕಕ್ಕೆ ತಿಳಿಸುವ ಕೆಲಸವನ್ನು ಈ ಕೃತಿ ಮಾಡಿದೆ’ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆಗೈದ ನಂತರ ಗೋಡ್ಸೆ ಬ್ರಾಹ್ಮಣ ಎನ್ನುವ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಪ್ರತಿಕಾರದ ಹಿಂಸಾಚಾರ ನಡೆಯಿತು ಎಂದರು.

ಸಾಹಿತಿ ಜಿ.ಬಿ. ಹರೀಶ್ ಮಾತನಾಡಿ, ‘ದೇಶದ ವಿವಿಧ ಭಾಗಗಳಲ್ಲಿ ನಡೆದ ಇಂತಹ ಘಟನೆಗಳ ವಿವರಗಳು ಇತಿಹಾಸದ ಮುಖ್ಯ ಪ್ರವಾಹದಲ್ಲಿ ಸಮರ್ಪಕವಾಗಿ ದಾಖಲಾಗಿಲ್ಲ. ಇತಿಹಾಸದ ಸತ್ಯಾಂಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಅಗತ್ಯ’ ಎಂದು ಹೇಳಿದರು.

ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ವಿಧಾನ ಪರಿಷತ್ನ ಮಾಜಿ ಸದಸ್ಯೆ ಎಸ್.ಆರ್. ಲೀಲಾ, ಚಿತ್ಪಾವನ ಸಮಾಜದ ಅಧ್ಯಕ್ಷ ಗಣಪತಿ ಜೋಶಿ, ಸಮೃದ್ಧ ಸಾಹಿತ್ಯದ ಪ್ರಕಾಶಕ ಹರ್ಷ ಸಮೃದ್ಧ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.