ಗುರುವಾರ , ನವೆಂಬರ್ 14, 2019
19 °C

ಆಟೊ ಚಾಲಕನ ಕೊಲೆ: ರೌಡಿಶೀಟರ್‌ಗೆ ಗುಂಡೇಟು

Published:
Updated:

ಬೆಂಗಳೂರು: ರೌಡಿಶೀಟರ್ ಆಟೊ ಸುನೀಲ್‌ನನ್ನು (27) ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್‌ ಹೊನ್ನಿ ಶ್ರೀಧರ್‌ನನ್ನು ಭಾನುವಾರ ರಾತ್ರಿ ಕಾಲಿಗೆ ಗುಂಡು ಹಾರಿಸಿ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೊಮ್ಮನಹಳ್ಳಿ ಠಾಣೆ ರೌಡಿಶೀಟರ್ ಶ್ರೀಧರ್, ಕೊಲೆ ಬಳಿಕ ತಲೆಮರೆಸಿಕೊಂಡಿದ್ದ. ಗುಂಡೇಟಿನಿಂದ ಗಾಯಗೊಂಡಿ
ರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಭಾನುವಾರ ರಾತ್ರಿ ಕೊಪ್ಪ ರಸ್ತೆಯ ನಿರ್ಜನ ಪ್ರದೇಶದಲ್ಲಿ ಶ್ರೀಧರ್ ಕಾಣಿಸಿಕೊಂಡಿದ್ದ. ಬಂಧಿಸಲು ಹೋಗಿದ್ದ ಹೆಡ್‌ಕಾನ್‌ಸ್ಟೆಬಲ್ ಮೇಲೆಯೇ ಹಲ್ಲೆ ಮಾಡಿದ್ದ. ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್ ಎಸ್‌.ಎಸ್‌. ಮಂಜು, ಶ್ರೀಧರ್‌ನ ಬಲಗಾಲಿಗೆ ಗುಂಡು ಹೊಡೆದು ಸೆರೆಹಿಡಿದಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)