‘ಜನರಲ್ಲಿ ಅರಿವು ಮೂಡಿಸಿ’

7
ನರಸೀಪುರ ಗ್ರಾಮದಲ್ಲಿ ಕಂದಾಯ ಅದಾಲತ್

‘ಜನರಲ್ಲಿ ಅರಿವು ಮೂಡಿಸಿ’

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ನರಸೀಪುರ ಗ್ರಾಮದ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಸೋಂಪುರ ಹೋಬಳಿಯ ಮೊದಲ ಹಂತದ ‘ಕಂದಾಯ ಅದಾಲತ್’ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕರು ಹಾಗೂ ರೈತರ ಅನುಕೂಲಕ್ಕಾಗಿ ಸರ್ಕಾರ ಈ ಕಾರ್ಯಕ್ರಮ ಹಾಕಿಕೊಂಡಿದೆ. ಇಲ್ಲಿ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದಂತೆ ಕಾಣುತ್ತಿಲ್ಲ ಎಂದು ತಹಶೀಲ್ದಾರ್‌ ಕೆ.ಎನ್.ರಾಜಶೇಖರ್‌ ಅವರು ಗ್ರಾಮಲೆಕ್ಕಿಗರು ಮತ್ತು ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು.

‘ಜನರ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಕಂದಾಯ ಅದಾಲತ್ ಯೋಜನೆ ಅಡಿ, ಕಂದಾಯ ವೃತ್ತಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಕ್ಷಮದಲ್ಲಿ ರೈತಾಪಿ ವರ್ಗದ ಎಲ್ಲಾ ರೀತಿಯ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಬೆಳೆ ಇಂದೀಕರಣ ಸೌಲಭ್ಯ ಒದಗಿಸಿದೆ. ಅದರ ಮುಂದುವರಿದ ಭಾಗವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಜನತೆ ಸಕಾಲದಲ್ಲಿ ಹಾಜರಿದ್ದು ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗುತ್ತದೆ’ ಎಂದು ತಹಶೀಲ್ದಾರ್‌ ಹೇಳಿದರು.

ಕೆಲವು ಸಾರ್ವಜನಿಕರು ತಿದ್ದುಪಡಿ, ಖಾತೆ ಬದಲಾವಣೆ ಸಂಬಂಧಿಸಿ ಅರ್ಜಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರೊಬೇಷನರಿ ತಹಶೀಲ್ದಾರ್‌ ಶಿಲ್ಪಾ, ಸೋಂಪುರ ಹೋಬಳಿ ಪ್ರಭಾರ ತಹಶೀಲ್ದಾರ್‌ ಅನಸೂಯಮ್ಮ, ಸೋಂಪುರ-2 ರಾಜಸ್ವ ನಿರೀಕ್ಷಕ ಪಂಚಾಕ್ಷರಿ, ಗ್ರಾಮಲೆಕ್ಕಿಗರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !