ಶುಕ್ರವಾರ, ಆಗಸ್ಟ್ 6, 2021
23 °C

ವಾತ ಚೂರ್ಣಂ, ಶುದ್ಧಿ ಸ್ಯಾನಿಟೈಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಕೋಟಕಲ್‌ನ ಆರ್ಯವೈದ್ಯ ಶಾಲಾ ಸಂಸ್ಥೆಯು ಆಯುಷ್‌ ವಾತ ಚೂರ್ಣಂ ಮತ್ತು ಶುದ್ಧಿ ಸ್ಯಾನಿಟೈಸರ್‌ ಬಿಡುಗಡೆ ಮಾಡಿದೆ. 

ಸೋಂಕು ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಆರೋಗ್ಯ ವೃದ್ಧಿಸಲು ಇವು ಸಹಾಯಕವಾಗಿವೆ. ಕಂದಾಯ ಸಚಿವ ಆರ್‌. ಅಶೋಕ ಅವರು ಈ ಉತ್ಪನ್ನಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಸಂಸ್ಥೆಯ ಟ್ರಸ್ಟಿ ಡಾ. ಸುಜಿತ್‌ ಎಸ್‌. ವಾರಿಯರ್‌ ಉಪಸ್ಥಿತರಿದ್ದರು. 

ಆಯುಷ್‌ ಸಚಿವಾಲಯದ ನಿರ್ದೇಶನದೊಂದಿಗೆ ವಾತ ಚೂರ್ಣಂ ಸಿದ್ಧಪಡಿಸಲಾಗಿದೆ. ಸಂಸ್ಥೆಯ ವಿತರಣಾ ಕೇದ್ರಗಳು ಮತ್ತು ಇತರೆ ಮಳಿಗೆಗಳಲ್ಲಿಯೂ ಖರೀದಿಸಿಬಹುದಾಗಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು