ಬೆಂಗಳೂರು: ವರ್ತೂರಿನ ಒಂಬತ್ತು ತಿಂಗಳ ಮಗುವೊಂದರ ಶ್ವಾಸಕೋಶ ಸೇರಿದ್ದ ಗೊಂಬೆಯ ಕಣ್ಣನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರು ‘ಹೈಬ್ರಿಡ್ ಬ್ರಾಂಕೋಸ್ಕೋಪಿ’ ವಿಧಾನದ ಮೂಲಕ ಹೊರತೆಗೆದಿದ್ದಾರೆ.

ಮಗು ಆಟವಾಡುತ್ತಿರುವ ವೇಳೆ ಗೊಂಬೆಯ ಕಣ್ಣು ಮೂಗಿನ ಮೂಲಕ ಶ್ವಾಸಕೋಶ ಸೇರಿತ್ತು. ಪಾಲಕರು ಇದನ್ನು ಗಮನಿಸಿರಲಿಲ್ಲ. ಬಳಿಕ ಮಗುವಿಗೆ ಉಸಿರಾಟದ ತೊಂದರೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, ವರ್ತೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರು. ವೈದ್ಯಕೀಯ ಪರೀಕ್ಷೆ ನಡೆಸಿ, ಎಕ್ಸ್–ರೆ ಮಾಡಿದಾಗ ಚಿಕ್ಕ ವಸ್ತುವೊಂದು ಶ್ವಾಸಕೋಶ ಸೇರಿರುವುದು ದೃಢಪಟ್ಟಿತು. ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ ‘ಹೈಬ್ರಿಡ್ ಬ್ರಾಂಕೋಸ್ಕೋಪಿ’ ವಿಧಾನದ ಮೂಲಕ ವಸ್ತುವನ್ನು ತೆಗೆಯಲಾಯಿತು ಎಂದು ವೈದ್ಯರು ತಿಳಿಸಿದರು.

‘ಸಾಮಾನ್ಯವಾಗಿ ಇಂತಹ ಪ್ರಕ್ರಿಯೆಗಳು 15ರಿಂದ 30 ನಿಮಿಷಗಳಲ್ಲಿ ಮುಗಿಯುತ್ತವೆ. ಆದರೆ, ಈ ಪ್ರಕರಣದಲ್ಲಿ ವಸ್ತುವಿನ ಸ್ಥಾನ ಮತ್ತು ಮಗುವಿನ ವಯಸ್ಸಿನ ಕಾರಣ ಹೆಚ್ಚು ಸಮಯ ಬೇಕಾಯಿತು. ಚಿಕಿತ್ಸೆಯ ಬಳಿಕ ಮಗು ವೇಗವಾಗಿ ಚೇತರಿಸಿಕೊಂಡಿತು. 36 ಗಂಟೆಗಳಲ್ಲೇ ಮಗುವನ್ನು ಮನೆಗೆ ಕಳುಹಿಸಲಾಯಿತು’ ಎಂದು ಡಾ. ತೇಜಸ್ವಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.