ಬೆಂಗಳೂರು: ‘ವಿಶ್ವ ಬ್ಯಾಡ್ಮಿಂಟನ್ನಲ್ಲಿಪ್ರಬಲ ಶಕ್ತಿಯಾಗಲು ಭಾರತಕ್ಕೆ ಕಾಲ ಪಕ್ವಗೊಂಡಿದೆ’ ಎಂದು ದಿಗ್ಗಜ ಆಟಗಾರ ಪ್ರಕಾಶ್ ಪಡುಕೋಣೆ ಅವರು ಮಂಗಳವಾರ ಅಭಿಪ್ರಾಯಪಟ್ಟರು.

‘ಈಗಿನ ಅಗ್ರಶ್ರೇಣಿಯ ಯುವ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಅವರು ಇದಕ್ಕಿಂತ ಚೆನ್ನಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಸಿಗುತ್ತಿರುವ ಬೆಂಬಲ ನೋಡಿದರೆ ಅವರು ಸ್ಥಿರ ಪ್ರದರ್ಶನ ನೀಡಬೇಕಾಗಿದೆ. ಪ್ರತಿಯೊಬ್ಬ ಆಟಗಾರನಿಗೂ ವೈಯಕ್ತಿಕ ಕೋಚ್, ಫಿಸಿಯೊ, ಸ್ಟ್ರೆಂತ್ ಅಂಡ್ ಕಂಡಿಷನಿಂಗ್ ಕೋಚ್, ಪೌಷ್ಟಿಕಾಂಶ ತಜ್ಞರ ತಂಡವಿದೆ. ಇದಕ್ಕೆ ನನ್ನದೇನೂ ವಿರೋಧವಿಲ್ಲ. ಆದರೆ ಅವರಿಗೆ ಸಿಗುತ್ತಿರುವ ಉತ್ತೇಜನ ನೋಡಿದರೆ ಅವರು ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿದೆ. ಆರು ತಿಂಗಳಿಗೊ, ಎರಡು ವರ್ಷಕ್ಕೊ ಒಂದು ಪ್ರಶಸ್ತಿ ಗೆಲ್ಲುವುದಷ್ಟಕ್ಕೇ ಸಂತುಷ್ಟರಾಗಬಾರದು’ಎಂದು 70 ವರ್ಷ ವಯಸ್ಸಿನ ಪಡುಕೋಣೆ ಅಭಿಪ್ರಾಯಪಟ್ಟರು.

ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (ಪಿಎಸ್ಬಿ) ಮತ್ತು ಶ್ರೀರಾಮ್ ಫೈನಾನ್ಸ್ ಲಿ. ಸಹಭಾಗಿತ್ವ ಘೋಷಣೆಯ ಸಂದರ್ಭದಲ್ಲಿ ಅವರು ಆಯ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

‘ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಬಿಡುವಿಲ್ಲದ ವೇಳಾಪಟ್ಟಿ ರೂಪಿಸಿದೆ. ಇಂಥ ಸಂದರ್ಭದಲ್ಲಿ ಆಟಗಾರರು ಜಾಣ್ಮೆಯಿಂದ ತಾವು ಆಡುವ ಟೂರ್ನಿಗಳನ್ನು ಆಯ್ಕೆ ಮಾಡಬೇಕು. ಆದರೆ ಪ್ರತಿ ವಾರ ರ್ಯಾಂಕಿಂಗ್ ಪರಿಷ್ಕೃತ ಗೊಳ್ಳುವಾಗ ತಮ್ಮ ಸ್ಥಾನ ಕುಸಿಯದಂತೆ ಆಟಗಾರರು ಎಚ್ಚರಿಕೆ ವಹಿಸುತ್ತಾರೆ. ಒಂದೊಮ್ಮೆ ನಾನು ಈಗ ಆಡುತ್ತಿದ್ದರೆ ರ್ಯಾಂಕಿಂಗ್ ಕುಸಿತದ ಕಡೆ ತಲೆಕೆಡಿಸಿ ಕೊಳ್ಳದೇ ಟೂರ್ನಿ ಗೆಲ್ಲುವ ಕಡೆ ಗಮನಹರಿಸುತ್ತಿದ್ದೆ’ ಎಂದರು.

ಬಿಡಬ್ಲ್ಲುಎಫ್ ಇನ್ನು ಮುಂದೆ 21 ಪಾಯಿಂಟ್ ಸ್ಕೋರಿಂಗ್ ಮಾದರಿ ಬದಲು 15 ಪಾಯಿಂಟ್ಗಳಿಗೆ ಇಳಿಸಲು ನಿರ್ಧರಿಸಿರುವ ಬಗ್ಗೆ ಮಾತನಾಡಿದ ಅವರು, ‘ನಾನು 21 ಪಾಯಿಂಟ್ ಮಾದರಿ ಇಷ್ಟಪಡುತ್ತೇನೆ. 15 ಪಾಯಿಂಟ್ಗಳ ಮಾದರಿ ಸಣ್ಣ ಮಟ್ಟಿನಲ್ಲಿರಲಿ. ಕ್ರಿಕೆಟ್ನಲ್ಲಿ ಟಿ20, ಏಕದಿನ, ಟೆಸ್ಟ್ ಮಾದರಿಗಳಿರು ವಂತೆ. ಬ್ಯಾಡ್ಮಿಂಟನ್ನಲ್ಲೂ ನಾವು ಇದನ್ನು ಏಕೆ ಪರಿಶೀಲಿಸಬಾರದು. 21 ಪಾಯಿಂಟ್ ಮಾದರಿಯನ್ನು ತೆಗೆದುಹಾಕಬಾರದು’ಎಂದು ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1073826417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.