ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಉದ್ದೇಶದಿಂದ ಹಿಂಬಾಲಿಸಿದರೂ ಕಠಿಣ ಶಿಕ್ಷೆ

ಪೋಕ್ಸೊ; ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮತ್ತು ಶಿಕ್ಷೆಗಳ ನಿಗದಿ ಮಾಡಿರುವ ಕಾಯ್ದೆ
Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಮಕ್ಕಳಿಗೆ ಕಾನೂನಿನ ರಕ್ಷಣೆ ಮತ್ತು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2012ರಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ’ಯನ್ನು (ಪ್ರೊಟೆಕ್ಷನ್ ಆಫ್ ಚಿಲ್ದ್ರನ್ ಫ್ರಂ ಸೆಕ್ಸ್ಯುಯಲ್ ಅಫೆನ್ಸಸ್ ಆ್ಯಕ್ಟ್–ಪೋಕ್ಸೊ) ಜಾರಿಗೆ ತಂದಿತು.

ಲೈಂಗಿಕ ಅಪರಾಧಗಳು ಯಾವುವು ಎಂಬುದನ್ನು ಈ ಕಾಯ್ದೆ ಸ್ಪಷ್ಟವಾಗಿ ವಿವರಿಸುತ್ತದೆ. ಅಲ್ಲದೆ ಆಯಾ ಸ್ವರೂಪದ ಲೈಂಗಿಕ ಅಪರಾಧಕ್ಕೆ ಶಿಕ್ಷೆಯ ಪ್ರಮಾಣವನ್ನೂ ಪೋಕ್ಸೊ ನಿಗದಿಪಡಿಸಿದೆ. ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನೂ ಈ ಕಾಯ್ದೆ ಲೈಂಗಿಕ ಅಪರಾಧವೆಂದೇ ಪರಿಗಣಿಸುತ್ತದೆ.

ಅತ್ಯಾಚಾರ
ಅಪರಾಧ: ಅತ್ಯಾಚಾರ ಮತ್ತು ಮುಖಮೈಥುನ. ಮಕ್ಕಳಿಂದ ಮುಖಮೈಥುನ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳಿಗೆ ಮುಖಮೈಥುನ ಮಾಡುವುದೂ ಅತ್ಯಾಚಾರ

7 ವರ್ಷ ಸೆರೆವಾಸ: ಇದು ಜೈಲುಶಿಕ್ಷೆಯ ಕನಿಷ್ಠಾವಧಿಯಾಗಿದ್ದು, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದು. ಜತೆಗೆ ದಂಡ

*
ಅಧಿಕಾರದಲ್ಲಿ ಇರುವವರಿಂದ ಬಲಾತ್ಕಾರ
ಪೊಲೀಸ್ ಅಧಿಕಾರಿಗಳು/ಶಸಸ್ತ್ರ ಪಡೆಗಳ ಸಿಬ್ಬಂದಿ/ಸರ್ಕಾರದ ಇತರ ಇಲಾಖೆಗಳ ಸಿಬ್ಬಂದಿ ಒಳಗೊಂಡಂತೆ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳು ಎಸಗುವ ಅತ್ಯಾಚಾರ.

10 ವರ್ಷ ಸೆರೆವಾಸ: ಇದು ಜೈಲುಶಿಕ್ಷೆಯ ಕನಿಷ್ಠಾವಧಿಯಾಗಿದ್ದು, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದು. ಜತೆಗೆ ದಂಡನಾರ್ಹವೂ ಹೌದು

*
ಅಧಿಕಾರಸ್ಥರಿಂದ ದೌರ್ಜನ್ಯ
ಪೊಲೀಸ್ ಅಧಿಕಾರಿಗಳು/ಶಸಸ್ತ್ರ ಪಡೆಗಳ ಸಿಬ್ಬಂದಿ/ಸರ್ಕಾರದ ಇತರ ಇಲಾಖೆಗಳ ಸಿಬ್ಬಂದಿ ಒಳಗೊಂಡಂತೆ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳು ಎಸಗುವ ಲೈಂಗಿಕ ದೌರ್ಜನ್ಯಗಳು.

5 ವರ್ಷದಿಂದ 7 ವರ್ಷದವರೆಗೆ ಸೆರೆವಾಸ. ದಂಡ ವಿಧಿಸಲೂ ಅವಕಾಶ

*
ಕಿರುಕುಳ
ಲೈಂಗಿಕ ಉದ್ದೇಶದ ಯಾವುದೇ ವರ್ತನೆ, ಮಕ್ಕಳನ್ನು ಬೆತ್ತಲು ಮಾಡುವುದು, ಮಕ್ಕಳಿಗೆ ಲೈಂಗಿಕ/ನೀಲಿ ಚಿತ್ರಗಳನ್ನು ತೋರಿಸುವುದು. ಲೈಂಗಿಕ ಉದ್ದೇಶದಿಂದ ಹಿಂಬಾಲಿಸುವುದು, ಫೋನ್‌–ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಯಾವುದೇ ಸ್ವರೂಪದಲ್ಲಿ ಪದೇ–ಪದೇ ಸಂಪರ್ಕಿಸುವುದು.

3 ವರ್ಷ ಸೆರೆವಾಸ (ಇದು ಗರಿಷ್ಠ ಶಿಕ್ಷೆ). ದಂಡ ವಿಧಿಸಲೂ ಅವಕಾಶವಿದೆ.

*
ನೀಲಿಚಿತ್ರಕ್ಕಾಗಿ ಲೈಂಗಿಕ ಅಪರಾಧ
ನೀಲಿಚಿತ್ರಕ್ಕಾಗಿ ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು.

ನೀಲಿಚಿತ್ರಕ್ಕಾಗಿ ಮಕ್ಕಳ ಮೇಲೆ ಅತ್ಯಾಚಾರ/ದೌರ್ಜನ್ಯ ಎಸಗುವುದು.

3 ವರ್ಷ ಸೆರೆವಾಸ (ಎರಡನೇ ಬಾರಿ ಅಪರಾಧ ಸಾಬೀತಾದರೆ ಏಳು ವರ್ಷಗಳವೆರೆಗೆ ಸೆರೆವಾಸ). ದಂಡಕ್ಕೂ ಅವಕಾಶವಿದೆ.

6 ವರ್ಷ ಸೆರೆವಾಸದಿಂದ ಜೀವಾವಧಿ ಶಿಕ್ಷೆ ವಿಧಿಸಲೂ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT