ಬಾಲಭವನ: ಆಟದ ಸಾಮಗ್ರಿ ಮೇಲೆ ಬಿದ್ದ ಬಿದಿರು

7

ಬಾಲಭವನ: ಆಟದ ಸಾಮಗ್ರಿ ಮೇಲೆ ಬಿದ್ದ ಬಿದಿರು

Published:
Updated:
Deccan Herald

ಬೆಂಗಳೂರು: ಅಯ್ಯೋ... ದೇವರೆ, ನನ್ನ ಮಗು ಆಟವಾಡುತ್ತಿದ್ದಾಗ ಒಣಗಿದ ಬಿದಿರು ಮೈ ಮೇಲೆ ಬಿದ್ದಿದ್ದರೆ... ಏನು ಗತಿ..!

ಭಾನುವಾರ ಇಂತಹ ಗಾಬರಿಯ ಮಾತುಗಳು ಕೇಳಿ ಬಂದಿದ್ದು ಕಬ್ಬನ್‌ ಪಾರ್ಕ್‌ನ ಬಾಲಭವನದ ಆಟದ ಮೈದಾನದಲ್ಲಿ.

ಕೆಲವು ಒಣಗಿದ ಬಿದಿರ ಮೆಳೆಯೊಂದು ಬಾಲಭವನದಲ್ಲಿ ಮಕ್ಕಳ ಆಟದ ಸಾಮಗ್ರಿಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಆಗ ಅಲ್ಲಿ ಮಕ್ಕಳು ಆಡುತ್ತಿರಲಿಲ್ಲ.

ಕಬ್ಬನ್‌ ಉದ್ಯಾನದಲ್ಲಿ ಸುಮಾರು 45-60 ವರ್ಷಗಳಷ್ಟು ಹಳೆಯ ಬಿದಿರಿನ ಮೆಳೆಗಳಿವೆ. ಅವುಗಳಲ್ಲಿ ಅನೇಕವು ಒಣಗಿದ್ದು, ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿವೆ.

‘ಒಣಗಿದ ಬಿದಿರುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳನ್ನು ಅನೇಕ ಬಾರಿ ಒತ್ತಾಯಿಸಿದ್ದೇವೆ. ಆದರೂ, ಇನ್ನೂ ತೆರವುಗೊಳಿಸಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ತೋಟಗಾರಿಕಾ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಉದ್ಯಾನದಲ್ಲಿರುವ ಒಣಗಿರುವ ಬಿದಿರುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ. ಅವುಗಳನ್ನು ಆಗಸ್ಟ್ 20 ರಂದು ಹರಾಜು ಮಾಡಲಾಗುತ್ತದೆ. ಬಾಲಭವನದ ಬಳಿ ಇರುವ ಒಣಗಿದ ಬಿದಿರುಗಳನ್ನು ಶೀಘ್ರ ತೆರವುಗೊಳಿಸಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !