ಬೆಂಗಳೂರು: ದುಬೈ ಸೇರಿದಂತೆ ಪಶ್ಚಿಮ ಏಷ್ಯಾದ ಪ್ರಮುಖ ಸ್ಥಳಗಳಲ್ಲಿ ನಾಲ್ಕೈದು ದಿನಗಳಿಂದ ಸಿಲುಕಿದ್ದ ಕನ್ನಡಿಗರು ಗುರುವಾರ ಬೆಂಗಳೂರಿಗೆ ವಾಪಸಾದರು.

60 ವರ್ಷಕ್ಕೂ ಮೇಲ್ಪಟ್ಟ 60 ಹಿರಿಯರು, ಇತರರನ್ನು ಒಳಗೊಂಡ ವಿಮಾನವು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಬಳ್ಳಾರಿ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಶಾಸಕ ಬಿ.ನಾಗೇಂದ್ರ ವಿಮಾನ ನಿಲ್ದಾಣಕ್ಕೆ ಆಗಮಿಸಿ ಎಲ್ಲರನ್ನೂ ಬರ ಮಾಡಿಕೊಂಡರು.

ಪ್ರವಾಸಕ್ಕೆ ಹೊರಟ ನಂತರ ಅಲ್ಲಿ ಉಂಟಾಗಿದ್ದ ಆತಂಕದ ಸನ್ನಿವೇಶ, ಸ್ಥಳೀಯ ಸರ್ಕಾರ, ಕನ್ನಡಪರ ಸಂಘಟನೆಗಳು, ದುಬೈ ಕನ್ನಡ ಕೂಟ ನೀಡಿದ ಸಹಕಾರ, ಕರ್ನಾಟಕ ಸರ್ಕಾರ ಆತ್ಮಸ್ಥೈರ್ಯ ತುಂಬಿದ್ದನ್ನು ಪ್ರವಾಸಿಗರು ಹಂಚಿಕೊಂಡರು.

ಸುರಕ್ಷಿತ ವಸತಿ ವ್ಯವಸ್ಥೆ, ಸಮಯಕ್ಕೆ ಸರಿಯಾದ ಆಹಾರ ಮತ್ತು ವೈದ್ಯಕೀಯ ನೆರವು. ಕಷ್ಟಕರ ಪರಿಸ್ಥಿತಿಯಲ್ಲೂ ವಿಮಾನ ವ್ಯವಸ್ಥೆ ಮಾಡಿದ್ದನ್ನು ನೆನಪಿಸಿಕೊಂಡರು.

‘ಇನ್ನೂ 150 ರಿಂದ 200 ಮಂದಿ ಕನ್ನಡಿಗರು ದುಬೈ ಸೇರಿದಂತೆ ಯುಎಇ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲು ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

‘ಉದ್ಯಮಿ ರೊನಾಲ್ಡ್ ಕೊಲಾಸೊ ಜತೆಗಿದ್ದು ಧನಸಹಾಯ ಮಾಡಿದರು. ಅವರ ನಿರ್ದೇಶನದಂತೆ ಎಲ್ಲ ರೀತಿಯ ನೆರವು ನೀಡಲಾಯಿತು. ದುಬೈ ಉದ್ಯಮಿ ಹಿದಾಯತ್ ಅಡ್ಡಿಸ್ ಅವರ ಸಹಕಾರದಲ್ಲಿ ಪ್ರವಾಸಿಗರ ಡೇಟಾಬೇಸ್ ಸಂಗ್ರಹದ ಜತೆಗೆ ವಿಮಾನಗಳ ಮಾಹಿತಿಗೆ ಅಭಿವೃದ್ಧಿಪಡಿಸಿದ ಎಐ ಚಾಟ್ಬಾಟ್ ವ್ಯವಸ್ಥೆ ಮಾಡಿ, ಅವರನ್ನು ಬೆಂಗಳೂರಿಗೆ ಮರಳಿಸಲು ದುಬೈನಲ್ಲಿರುವ ಕನ್ನಡಿಗರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಯುಎಇಯಲ್ಲಿ ಯುದ್ಧ ಚಟುವಟಿಕೆಗಳ ಒತ್ತಡ ಸ್ವಲ್ಪ ಕಡಿಮೆಯಾಗಿದೆ, ಆದರೆ ಪರಿಸ್ಥಿತಿ ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಯುಎಇ ಸರ್ಕಾರವು ನಾಗರಿಕರು ಮತ್ತು ಪ್ರವಾಸಿಗರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.