ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟಾ’ ಪರಿಹಾರವಲ್ಲ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಹಲವು ಸಂಘಟನೆಗಳವರು, ಹೋರಾಟಗಾರರು ಈ ಬಾರಿಯ ಚುನಾವಣೆಯಲ್ಲಿ ‘ನೋಟಾ’ಕ್ಕೆ ಮತಹಾಕುವಂತೆ ಕರೆ ನೀಡಿದ್ದಾರೆ. ಮಾತುಕತೆಯ ಮೂಲಕ, ನ್ಯಾಯಯುತವಾಗಿ ಮತ್ತು ಸರ್ವ ಸಮ್ಮತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶಗಳಿವೆ. ಅಂತೆಯೇ ನಮ್ಮ ಬೇಡಿಕೆಗಳನ್ನು ಈಡೇರಿಸದ ನಾಯಕರನ್ನು ತಿರಸ್ಕರಿಸಿ ಸಮರ್ಥರನ್ನು ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಪ್ರಜಾಪ್ರಭುತ್ವ ನೀಡಿದೆ.

ಹೀಗೆ ಸಮರ್ಥರನ್ನು ಆಯ್ಕೆಮಾಡಿಕೊಳ್ಳುವ ಜವಾಬ್ದಾರಿ ಇರುವ ನಾವು, ‘ನೋಟಾ’ಕ್ಕೆ ಮತ ಚಲಾಯಿಸುವುದರಿಂದ ಸಾಧಿಸುವುದಾದರೂ ಏನನ್ನು?
ಸದಾಶಿವ ಆಯೋಗದ ವರದಿ ಜಾರಿ ಮಾಡದಿರುವ ಕಾರಣಕ್ಕೆ ನೋಟಾಗೆ ಮತ ಚಲಾಯಿಸಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಾಹೀರಾತಿನ ಮೂಲಕ ಸಮುದಾಯದವರನ್ನು ಕೇಳಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ರೈತ ಹೋರಾಟಗಾರರು, ಮಹದಾಯಿ ಸಮಸ್ಯೆ ಪರಿಹಾರವಾಗದ ಕಾರಣಕ್ಕೆ ನೋಟಾಗೆ ಮತಹಾಕುವಂತೆ ರೈತರಿಗೆ ಮನವಿ ಮಾಡಿದ್ದಾರೆ (ಪ್ರ.ವಾ., ಮೇ 8). ಹೀಗೆ ನೋಟಾದ ಮೂಲಕ ಆಕ್ರೋಶ ವ್ಯಕ್ತಪಡಿಸಬಹುದೇ ವಿನಾ ಸಮಸ್ಯೆಗಳಿಗೆ ಖಂಡಿತ ಅದು ಪರಿಹಾರ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಜನರು ತಮ್ಮ ಮತವನ್ನು ವ್ಯರ್ಥ ಮಾಡದೆ ಯೋಗ್ಯರಿಗೆ ಕೊಡುವ ಮೂಲಕ ಪ್ರಜಾಪ್ರಭುತ್ವ ನೀಡಿರುವ ಶಕ್ತಿಯನ್ನು ಬಳಕೆ ಮಾಡಬೇಕು.

-ಆರ್. ಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT