ಬೆಂಗಳೂರು: ನಗರದಲ್ಲಿ ಆಟೊಗಳಿಗೆ ಎಲ್ಪಿಜಿ ವಿತರಣೆಯಲ್ಲಿ ವ್ಯತ್ಯಯವಾಗಿದ್ದು, ದರವೂ ದುಬಾರಿಯಾಗಿರುವುದರಿಂದ ಸಮಸ್ಯೆಯಾಗಿದೆ.

ಎಲ್ಪಿಜಿ ಸರಬರಾಜಿನಲ್ಲಿ ಉಂಟಾಗುತ್ತಿರುವ ಗೊಂದಲದಿಂದಾಗಿ ಆಟೊಗಳಿಗೆ ಎಲ್ಪಿಜಿ ಪೂರೈಸಲು ಕಂಪನಿಗಳಿಗೂ ಆಗುತ್ತಿಲ್ಲ. ಹಲವು ಕಂಪನಿಗಳ ಅನಿಲ ಸ್ಟೇಷನ್ಗಳು ಸೇವೆ ಸ್ಥಗಿತಗೊಳಿಸಿವೆ. ನಾಲ್ಕು ದಿನಗಳಿಂದ ಹಲವು ಸ್ಟೇಷನ್ಗಳನ್ನು ಬಂದ್ ಮಾಡಲಾಗಿದೆ. ಇದರಲ್ಲಿ ಖಾಸಗಿ ಅನಿಲ ಕಂಪನಿಗಳ ಸ್ಟೇಷನ್ಗಳ ಸಂಖ್ಯೆಯೇ ಹೆಚ್ಚಾಗಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂಗೆ ಸೇರಿದ ಅನಿಲ ಸ್ಟೇಷನ್ಗಳ ಮುಂಭಾಗ ಆಟೊಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಕೆಲವು ಕಡೆಗಳಲ್ಲಿ ಮೂರು ಕಿ.ಮೀ ವರೆಗೂ ಆಟೊಗಳು ಸರತಿಯಲ್ಲಿ ನಿಂತಿದ್ದವು.

ಸರಬರಾಜಿನಲ್ಲಿ ವ್ಯತ್ಯಯವಾದಾಗಿನಿಂದ ಆಟೊ ಎಲ್ಪಿಜಿ ದರದಲ್ಲಿ ಹೆಚ್ಚಳವಾಗುತ್ತಲೇ ಇದೆ. ಪ್ರತಿ ಕೆಜಿಗೆ ಕೆಲವು ಕಡೆ ₹85 ರಿಂದ ₹120ವರೆಗೂ ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ. ಸರ್ಕಾರಿ ಸ್ವಾಮ್ಯದ ಕಂಪನಿಗಳ ದರದಲ್ಲಿ ಕಡಿಮೆ ಇದ್ದರೆ, ಖಾಸಗಿ ಕಂಪನಿಗಳಲ್ಲಿ ದುಬಾರಿ ಆಗಿದೆ.

‘ಮೂರು ದಿನಗಳಿಂದ ದಾಸ್ತಾನು ಬಾರದೇ ವಿತರಣೆ ಕಷ್ಟವಾಗಿದೆ. ಪರಿಸ್ಥಿತಿ ಚೆನ್ನಾಗಿ ಇದ್ದಾಗ 4 ಟನ್ ಇತ್ತು. ಈಗ 2 ಟನ್ ಸರಬರಾಜು ಆದರೆ ಹೆಚ್ಚು. ಯಾವಾಗ ಸರಿಯಾಗುತ್ತದೆಯೋ ಗೊತ್ತಿಲ್ಲ’ ಎಂದು ಮಾರಾಟ ಸಂಸ್ಥೆಯ ವ್ಯವಸ್ಥಾಪಕ ಚೇತನ್ಗೌಡ ತಿಳಿಸಿದರು.

‘ಎರಡು ದಿನದ ಹಿಂದೆ ಅನಿಲ ತುಂಬಿಸಿಕೊಂಡು ಓಡಿಸುತ್ತಿದ್ದೇನೆ. ಶನಿವಾರದ ಹೊತ್ತಿಗೆ ತುಂಬಿಸಲೇಬೇಕು. ಈಗಲೇ ಪರಿಸ್ಥಿತಿ ನೋಡಿದರೆ ಭಯವಾಗುತ್ತದೆ. ಎಲ್ಪಿಜಿ ಸಿಗುತ್ತದೋ ಇಲ್ಲವೋ ನೋಡಬೇಕು. ಇಲ್ಲದೇ ಇದ್ದರೆ ಆಟೊ ಓಡಿಸುವುದು ಕಷ್ಟವಾಗಲಿದೆ’ ಎಂದು ಚಾಲಕರಾದ ಕೃಷ್ಣಸ್ವಾಮಿ, ಶರವಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.