‘ವೀಕೆಂಡ್’ ನಾಟಕೋತ್ಸವ

ಬೆಂಗಳೂರು: ನಗರದ ವಿವಿಧ ರಂಗ ತಂಡಗಳು ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ‘ವೀಕೆಂಡ್’ ನಾಟಕೋತ್ಸವ ಹಮ್ಮಿಕೊಂಡಿದ್ದು, ಇದೇ 25ರಂದು ಸಂಜೆ 6.30ಕ್ಕೆ ದಾಟು ಥಿಯೇಟರ್ ವತಿಯಿಂದ ‘ಪರಿಸರದ ಕಥೆಗಳು’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ನಾಟಕ ಇದಾಗಿದ್ದು, ಮನು ಆರ್. ಅವರು ನಿರ್ದೇಶಿಸಿದ್ದಾರೆ. 26ರಂದು ಸಂಜೆ 6.30ಕ್ಕೆ ಅಂತರಂಗ ಬಹಿರಂಗ ತಂಡದಿಂದ ‘ಮಿಸ್ಟರ್. ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ ಕಾಣಲಿದೆ. ಭೀಷ್ಮ ರಾಮಯ್ಯ ಅವರು ರಚಿಸಿರುವ ಈ ನಾಟಕವನ್ನು ಬಾಷ್ ರಾಘವೇಂದ್ರ ನಿರ್ದೇಶಿಸಿದ್ದಾರೆ. ಈ ಎರಡು ನಾಟಕಗಳ ಟಿಕೆಟ್ಗಳು ಬುಕ್ ಮೈ ಶೊದಲ್ಲಿ ಲಭ್ಯ.

‘ಕಲಾ ಸ್ಪಂದನ’ ಸಂಗೀತ–ನೃತ್ಯ

ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಹಾಗೂ ಅಲಂಕೃತ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಜಂಟಿಯಾಗಿ ಇದೇ 25ರಂದು ಸಂಜೆ 6 ಗಂಟೆಗೆ ಜಯನಗರ 4ನೇ ಬ್ಲಾಕ್ನಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ‘ಕಲಾ ಸ್ಪಂದನ’ ಶಾಸ್ತ್ರೀಯ ಸಂಗೀತ–ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಪ್ರಕ್ಷಿಲಾ ಜೈನ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಹಿಂದೂಸ್ತಾನಿ ಗಾಯನದಲ್ಲಿ ವರ್ಣಿಕ ಸಂದೀಪ್, ರಿತೀಷ್ ಜೆ.ಆರ್. ಪಾಲ್ಗೊಳ್ಳಲಿದ್ದಾರೆ. ಋತುಪರ್ಣಾ ದೇಸಾಯಿ ಅವರಿಂದ ತಬಲಾ, ಸೃಷ್ಠಿ ದೇಸಾಯಿ ಅವರಿಂದ ಪಿಟೀಲು ಹಾಗೂ ನಾಗೇಂದ್ರ ರಾಣಾಪೂರ್ ಅವರಿಂದ ಹಾರ್ಮೋನಿಯಂ ವಾದನ ನಡೆಯಲಿದೆ.

ಕಾವ್ಯ ವಾಚನ, ಗೀತ ಗಾಯನ

ಬೆಂಗಳೂರು: ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ಇದೇ 25ರಂದು ಬೆಳಿಗ್ಗೆ 10.30ಕ್ಕೆ ಮಲ್ಲೇಶ್ವರದಲ್ಲಿರುವ ವೇದಮಾತ ಭವನದಲ್ಲಿರುವ ಲೀಲಾದ್ರಿ ಸಿಂಗರ್ಸ್ ಅಕಾಡೆಮಿಯಲ್ಲಿ ‘ಆಚಾರ್ಯತ್ರಯರು–ಕನ್ನಡ ಕವಿಗಳು ಕಂಡಂತೆ’ ಕಾರ್ಯಕ್ರಮದಡಿ ಕಾವ್ಯ ವಾಚನ ಮತ್ತು ಗೀತ ಗಾಯನ ಹಮ್ಮಿಕೊಂಡಿದೆ.

ಜಿ.ಎಸ್. ನಾರಾಯಣ ಅವರಿಂದ ಗಮಕ ವಾಚನ ನಡೆಯಲಿದೆ. ದಿವಾಕರ್ ಕಶ್ಯಪ್, ಗಾಯತ್ರಿ ಕೇಶವ, ನರಸಿಂಹ ಹರೀಶ್, ಪ್ರತಿಭಾ ನಂದನ್, ಅಪರ್ಣ ಪ್ರಸನ್ನ ಹಾಗೂ ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳಿಂದ ಗೀತ ಗಾಯನ ನಡೆಯಲಿದೆ. ಹರ್ಷ ಶಲವಾಡಿ (ಹಾರ್ಮೋನಿಯಂ), ಗಿರೀಶ್ ಶಲವಾಡಿ (ತಬಲಾ), ಎಸ್. ಶ್ಯಾಮದತ್ತ (ರವಿ) ಅವರು ವಾದ್ಯ ಸಹಕಾರ ನೀಡಲಿದ್ದಾರೆ.

ಶಾಸ್ತ್ರೀಯ ನೃತ್ಯ ಪ್ರದರ್ಶನ

ಬೆಂಗಳೂರು: ನಟೇಶ ನೃತ್ಯಾಲಯವು ಇದೇ 25ರಂದು ಬೆಳಿಗ್ಗೆ 10 ಗಂಟೆಯಿಂದ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ‘ರಸ, ಭಾವ ಮತ್ತು ಕಲೆ’ ಶೀರ್ಷಿಕೆಯಡಿ ಶಾಸ್ತ್ರೀಯ ನೃತ್ಯ ಪ್ರದರ್ಶನ ಹಮ್ಮಿಕೊಂಡಿದೆ.

ಶ್ರೀಹರಿ ಮತ್ತು ಶಿಷ್ಯರಿಂದ ಕಥಕ್, ನಯನಾ ಶ್ರೀನಿವಾಸಮೂರ್ತಿ ಅವರಿಂದ ಭರತನಾಟ್ಯ, ದೆವೇಶ್ ನಾಯರ್ ಅವರಿಂದ ಕೂಚಿಪುಡಿ, ನೀನಾ ಪ್ರಸಾದ್ ಅವರಿಂದ ಮೋಹಿನಿಯಾಟ್ಟಂ, ಪಿ. ಪ್ರವೀಣ್ ಕುಮಾರ್ ಅವರಿಂದ ಭರತನಾಟ್ಯ, ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ವತಿಯಿಂದ ‘ಗೋವರ್ಧನ ಲೀಲೆ’ ನೃತ್ಯ ರೂಪಕ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.