ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮನೆಯ ಮುಂದೆ ಅಡ್ಡವಾಗಿದ್ದ ಮರಕ್ಕೆ ವಿಷದ ಇಂಜೆಕ್ಷನ್ ಚುಚ್ಚಿದ ಡಾಕ್ಟರ್

Last Updated 6 ನವೆಂಬರ್ 2019, 8:41 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಮನೆಯಮುಂದೆ ಅಡ್ಡವಾಗಿದ್ದ ಮರಕ್ಕೆ ವೈದ್ಯರೊಬ್ಬರು ವಿಷವುಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದಕ್ಷಿಣ ಬೆಂಗಳೂರು ರಾಜರಾಜೇಶ್ವರಿ ನಗರ ಮೂರನೇ ಹಂತ, ಬಿಇಎಂಎಲ್ ಲೇಔಟ್‌ನಲ್ಲಿರುವ ಪಂಚಶೀಲಬ್ಲಾಕ್ ನಿವಾಸಿ ಡಾ. ನರೇಂದ್ರ ನಿಖಿತಾ ಎಂಬವರು ಮರದ ಕಾಂಡಕ್ಕೆಪಾದರಸ ಇಂಜೆಕ್ಷನ್ ಚುಚ್ಚಿದ್ದಾರೆ.

ಅಕ್ಟೋಬರ್ 30ರಂದು ಅಲ್ಲಿನ ನಿವಾಸಿಗಳ ಸಂಘ ಡಾ. ನರೇಂದ್ರ ಅವರಲ್ಲಿ ಈ ಬಗ್ಗೆ ಕೇಳಿದಾಗ ತನ್ನ ಮನೆ ಮುಂದೆ ಇರುವ 15 ವರ್ಷ ಪ್ರಾಯದ ಮರವನ್ನು ಕಡಿಯಲು ಬಿಬಿಎಂಪಿ ಅನುಮತಿಗಾಗಿ ಮನವಿ ಮಾಡಿದ್ದೇನೆ ಎಂದಿದ್ದರು. ಆರ್‌ಆರ್ ನಗರದ ಬಿಬಿಎಂಪಿ ಟ್ರೀ ಆಫೀಸರ್ ಭಾನು ಪ್ರಕಾಶ್ ಅವರಿಂದ ಯಾವುದೇ ಪ್ರತಿಕ್ರಿಯೆ ಲಭಿಸದೇ ಇದ್ದಾಗಡಾ. ನರೇಂದ್ರ ಅವರು ಮರಕ್ಕೆ ಪಾದರಸ ಇಂಜೆಕ್ಷನ್ ಚುಚ್ಚಿದ್ದಾರೆ ಎಂದು ನಿವಾಸಿಗಳ ಸಂಘ ಆರೋಪಿಸಿದೆ.

ಅವರ ಮನೆಗೆ ಮರ ಅಡ್ಡವಾಗಿರುವ ಕಾರಣ ಮರದ ಕಾಂಡದಲ್ಲಿ ಚಿಕ್ಕ ರಂಧ್ರ ಕೊರೆದು ಅದಕ್ಕೆ ವಿಷ ಚುಚ್ಚಿದ್ದಾರೆ ಎಂದು ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದ ಜಂಟಿ ಕಾರ್ಯದರ್ಶಿ ರಾಜಕುಮಾರ್ ಹೇಳಿದ್ದಾರೆ.

ವರ್ಷಗಳ ಹಿಂದೆ ಡಾ. ನರೇಂದ್ರ ಅವರು ಮನೆ ನಿರ್ಮಿಸುವಾಗ ಎರಡು ಮರಗಳನ್ನು ಕಡಿದಿದ್ದರು. ಇಲ್ಲಿಯವರೆಗೆ ಅವರು ಶಾಂತಿ ಮಾರ್ಗ್‌ನಲ್ಲಿದ್ದ 5 ಮರಗಳನ್ನು ಕಡಿದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಮರಗಳು ವೈದ್ಯರ ಕುಟುಂಬದವರಿಗೆ ಅಸ್ತಮಾ ಉಂಟು ಮಾಡುತ್ತಿದ್ದರಿಂದ ಆ ಮರಗಳನ್ನು ನಾಶ ಮಾಡಬೇಕೆಂದು ಡಾ.ನರೇಂದ್ರ ಹೇಳಿದ್ದರು ಅಂತಾರೆ ರಾಜ್‌ಕುಮಾರ್.

ಡಾ.ನರೇಂದ್ರ ವಿರುದ್ಧಪಂಚಶೀಲ ಬ್ಲಾಕ್ ನಿವಾಸಿಗಳ ಸಂಘ ಬಿಬಿಎಂಪಿ ಫಾರೆಸ್ಟ್ ಸೆಲ್‌ಗೆ ದೂರು ನೀಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT