ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ₹25 ಲಕ್ಷ ಕಳ್ಳತನ ಮಾಡಿದ್ದ ಮನೆಗೆಲಸದಾಕೆಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, ₹15 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಜ್ಞಾನಭಾರತಿ ಲೇಔಟ್ ನಿವಾಸಿ ಬದರಿ ರಂಗನ್ ಎಂಬುವರ ಮನೆಯಲ್ಲಿ ರತ್ನಮ್ಮ ಎಂಬುವವರು ಹತ್ತು ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದರು.

ಎರಡು ವರ್ಷದ ಹಿಂದೆ ಬದರಿ ರಂಗನ್ ಅವರು ಫ್ಲ್ಯಾಟ್ವೊಂದನ್ನು ಮಾರಾಟ ಮಾಡಿದ್ದು, ಅದರಿಂದ ಬಂದಿದ್ದ ₹25 ಲಕ್ಷ ಹಣವನ್ನು ಬೀರುವಿನಲ್ಲಿಟ್ಟಿದ್ದರು. ಇತ್ತೀಚೆಗೆ ನಿವೇಶನ ಖರೀದಿಸಲು ಮುಂಗಡ ಹಣ ನೀಡಬೇಕಾಗಿದ್ದರಿಂದ ಬೀರುವನ್ನು ತೆರೆದು ನೋಡಿದಾಗ ಹಣ ಇರಲಿಲ್ಲ. ಗಾಬರಿಗೊಂಡ ಅವರು ಪತ್ನಿ ಮತ್ತು ತಾಯಿಯನ್ನು ವಿಚಾರಿಸಿದಾಗ ಹಣದ ಬಗ್ಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.

ಬದರಿ ಅವರು ಅನುಮಾನಗೊಂಡು ಮನೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ರತ್ನಮ್ಮ ಅವರು ಹಣ ಕಳವು ಮಾಡಿರುವ ದೃಶ್ಯ ಸೆರೆಯಾಗಿದೆ.

ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು, ಆಕೆಯ ಮನೆಯನ್ನು ಶೋಧಿಸಿ ₹15 ಲಕ್ಷ ಹಣವನ್ನು ವಶ ಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.