ಮಂಗಳವಾರ, 19 ಮೇ 2026
×
ADVERTISEMENT

ಬೆಂಗಳೂರು|ಮೇಲ್ಸೇತುವೆಗಳ ವೆಚ್ಚ ಕಿ.ಮೀಗೆ ₹55 ಕೋಟಿ ಹೆಚ್ಚಳ: ಕಾರ್ಯಸಾಧ್ಯತಾ ವರದಿ

Published : 17 ಏಪ್ರಿಲ್ 2026, 21:30 IST
Last Updated : 18 ಏಪ್ರಿಲ್ 2026, 0:53 IST
ADVERTISEMENT
ಫಾಲೋ ಮಾಡಿ
Comments
ಪದ್ಮನಾಭ ರೆಡ್ಡಿ
ಪದ್ಮನಾಭ ರೆಡ್ಡಿ
ಹಣ ಎಲ್ಲಿದೆ ಯಾರು ಕೊಡುತ್ತಾರೆ?’
‘ಬಿ–ಸ್ಮೈಲ್‌ನಿಂದ 11 ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ನಿಜ. ಆದರೆ ಬಿ–ಸ್ಮೈಲ್‌ಗೆ ಹಣ ಯಾರು ನೀಡುತ್ತಾರೆ ಎಂಬುದನ್ನೇ ತಿಳಿಸಿಲ್ಲ. ₹4000 ಕೋಟಿಯನ್ನು ಬೃಹತ್‌ ಯೋಜನೆಗಳ ಅನುಷ್ಠಾನಕ್ಕೆ ಬಿ–ಸ್ಮೈಲ್‌ಗೆ ನೀಡಲಾಗುತ್ತದೆ ಎಂದು 2025–26ನೇ ಸಾಲಿನ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ ಅದರಲ್ಲಿ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಇನ್ನು 2026–27ನೇ ಸಾಲಿನ ಬಜೆಟ್‌ನಲ್ಲಿ ₹4000 ಕೋಟಿ ಸೇರಿದಂತೆ ಒಟ್ಟು ₹7 ಸಾವಿರ ಕೋಟಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಅಂದಾಜು ವೆಚ್ಚದ ಪುಸ್ತಕದಲ್ಲಿ ₹3 ಸಾವಿರ ಕೋಟಿ ನೀಡುವ ಬಗ್ಗೆ ಮಾತ್ರ ಮಾಹಿತಿ ಇದೆ. ಹೀಗಾಗಿ ಟೆಂಡರ್ ಕಾರ್ಯಾದೇಶಕ್ಕೇ ಮೇಲ್ಸೇತುವೆಗಳ ಪ್ರಕ್ರಿಯೆ ನಿಲ್ಲಲ್ಲಿದ್ದು ರಸ್ತೆಗಳನ್ನು ಹಾಳು ಮಾಡಿ ವರ್ಷಾನುಗಟ್ಟಲೆ ನಾಗರಿಕರಿಗೆ ಸಂಕಷ್ಟ ನೀಡುವ ಯೋಜನೆಗಳಾಗಲಿವೆ’ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಹೇಳಿದರು.
ಎನ್‌.ಆರ್‌. ರಮೇಶ್‌
ಎನ್‌.ಆರ್‌. ರಮೇಶ್‌
‘ಅಧಿಕಾರಿಗಳ ಕ್ರಿಮಿನಲ್‌ ಅಪರಾಧ’
‘ಜೆ.ಸಿ. ರಸ್ತೆಯಲ್ಲಿ ಇತ್ತೀಚೆಗೆ ತಾನೆ ₹80 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಮುಗಿದಿದೆ. ಅದೇ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಸಲು ಬಿ–ಸ್ಮೈಲ್‌ ಅಧಿಕಾರಿಗಳು ಮುಂದಾಗಿದ್ದಾರೆ. ನಾಗರಿಕರ ಹಣವನ್ನು ಈ ರೀತಿ ವ್ಯರ್ಥ ಮಾಡುವುದು ಕ್ರಿಮಿನಲ್‌ ಅಪರಾಧ. ಇಂತಹವರಿಗೆ ತಕ್ಕ ಶಿಕ್ಷೆ ಆಗಬೇಕು. ಸರ್ಕಾರಕ್ಕೆ ವೈಟ್‌ ಟಾಪಿಂಗ್‌ ಬಗ್ಗೆ ಮಾಹಿತಿ ಇದ್ದರೂ ಅಲ್ಲೇ ಮೇಲ್ಸೇತುವೆ ನಿರ್ಮಿಸಲು ಅನುಮತಿ ನೀಡಿರುವುದು ಖಂಡನಾರ್ಹ. ಈ ಬಗ್ಗೆ ಹೋರಾಟ ಮಾಡುತ್ತೇವೆ’ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT