ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಧಾರ್ಮಿಕ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು, ಸೋಮವಾರ ಹಸಿ ಕರಗ ಕಾರ್ಯಕ್ರಮ ನಡೆಯಲಿದೆ.

ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಮಹೋತ್ಸವದ ಆರನೇ ದಿನವಾದ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ಆರತಿ ಕಾರ್ಯಕ್ರಮ ನಡೆಯಿತು.

ಹಸಿ ಕರಗಕ್ಕಾಗಿಯೇ ಸಾಂಪ್ರದಾಯಿಕವಾಗಿ ನಾನಾ ಪೂಜಾ ವಿಧಾನಗಳನ್ನು ಕೈಗೊಳ್ಳಲಾಗುತ್ತದೆ. ಹಸಿ ಕರಗವು ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಆರಂಭವಾಗಲಿದೆ. ನಂತರ ರಾತ್ರಿಯಿಡೀ ಹಸಿ ಕರಗ ಮೆರವಣಿಗೆ ನಡೆಯಲಿದ್ದು ಬಳಿಕ ಧರ್ಮರಾಯಸ್ವಾಮಿ ದೇವಸ್ಥಾನ ತಲುಪಲಿದೆ.

’ಸಂಪ್ರದಾಯಂತೆಯೇ ಧಾರ್ಮಿಕ ಆಚರಣೆಗಳನ್ನು ಸಂಪಂಗಿ ಕೆರೆಯಲ್ಲಿರುವ ಶಕ್ತಿ ಪೀಠದಲ್ಲಿ ಆರಂಭಿಸಲಾಗುತ್ತದೆ. ಅಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಸಿದ್ದತೆಗಳು ಆರಂಭಗೊಳ್ಳಲಿದ್ದು ಸಂಜೆ ಹೊತ್ತಿಗೆ ವೀರಕುಮಾರರು ಆಗಮಿಸಲಿದ್ದಾರೆ. ವಿಶೇಷ ಪೂಜೆಗಳ ನಂತರ ಹಸಿ ಕರಗವನ್ನು ಅಣಿಗೊಳಿಸಲಾಗುತ್ತದೆ.

‘ವಿಶೇಷ ಹೂವಿನ ಅಲಂಕಾರ, ವೇಷಭೂಷಣಗಳೊಂದಿಗೆ ಅರ್ಚಕ ಎ. ಜ್ಞಾನೇಶ್ ಕುಮಾರ್ ಅವರು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಹಸಿ ಕರಗವನ್ನು ಹಿಡಿದು ಸಂಪಂಗಿ ಕೆರೆಯಿಂದ ಜಿಬಿಎ ಆವರಣದಲ್ಲಿರುವ ಆದಿಶಕ್ತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಆ ನಂತರ ಧರ್ಮರಾಮಸ್ವಾಮಿ ದೇವಸ್ಥಾನದತ್ತ ತೆರಳಿ ಅಲ್ಲಿ ಸಂಪನ್ನಗೊಳ್ಳಲಿದೆ’ ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಪೊಂಗಲ್ ಸೇವೆ, ಬುಧವಾರ ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.