ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚುತ್ತಿದ್ದು, ವಾತಾವರಣದಲ್ಲಿ ಉಷ್ಣಾಂಶ ಏರಿಕೆ ಹಾಗೂ ಬಿಸಿ ಗಾಳಿಯಿಂದ ಜನ ಹೈರಾಣರಾಗುತ್ತಿದ್ದಾರೆ.

ತೇವಾಂಶ ಕೊರತೆ, ಶುಭ್ರ ಆಕಾಶ, ‘ಲಾ ನಿನಾ’ ತಟಸ್ಥವಾಗಿರುವ ಪರಿಣಾಮ ಸೇರಿ ವಿವಿಧ ಕಾರಣಗಳಿಂದ ತಾಪಮಾನವು ಸರಾಸರಿಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಬಿಸಿ ಗಾಳಿ ಕೂಡ ಬೀಸುತ್ತಿದ್ದು, ಮಧ್ಯಾಹ್ನದ ಅವಧಿಯಲ್ಲಿ ಹೊರಗಡೆ ಓಡಾಡುವುದು ಕಷ್ಟಸಾಧ್ಯವಾಗುತ್ತಿದೆ. ಈಗಾಗಲೇ ನಗರದ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮುಂದಿನ ವಾರವೂ ಮಳೆಯಾಗದಿದ್ದಲ್ಲಿ ಗರಿಷ್ಠ ಉಷ್ಣಾಂಶವು 37 ಡಿಗ್ರಿ ಸೆಲ್ಸಿಯಸ್ ದಾಟುವ ಬಗ್ಗೆ ಹವಾಮಾನ ಇಲಾಖೆ ಅಂದಾಜಿಸಿದೆ.

ಈ ತಿಂಗಳ ಬಹುತೇಕ ದಿನ ಗರಿಷ್ಠ ಉಷ್ಣಾಂಶವು 35ರಿಂದ 36 ಡಿಗ್ರಿ ಸೆಲ್ಸಿಯಸ್ನಷ್ಟು ವರದಿಯಾದರೆ, ಕನಿಷ್ಠ ಉಷ್ಣಾಂಶವು 24 ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಈ ಬಾರಿ ಬೇಸಿಗೆಯಲ್ಲಿ ನಿರೀಕ್ಷಿತ ಮಳೆ ಬಾರದಿದ್ದರಿಂದ, ದಿನದ ಬಹುತೇಕ ಅವಧಿ ಉಷ್ಣ ವಾತಾವರಣದಿಂದ ಕೂಡಿದೆ. ಈ ಅವಧಿಯಲ್ಲಿ ಬೇಸಿಗೆ ರಜೆಯ ಕಾರಣ, ಹೊರಾಂಗಣ ಆಟಗಳಿಗೆ ಮೊರೆ ಹೋಗುತ್ತಿರುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಬಿಸಿಲ ಧಗೆಗೆ ಅಸ್ವಸ್ಥಗೊಳ್ಳುತ್ತಿದ್ದಾರೆ.

ಸೆಕೆಯ ಅನುಭವ: ನಗರದಲ್ಲಿ ಕಳೆದ ಹಲವು ವರ್ಷಗಳಲ್ಲಿ ಏಪ್ರಿಲ್ನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2016ರಲ್ಲಿ ಗರಿಷ್ಠ 39.2 ಡಿಗ್ರಿ ಸೆಲ್ಸಿಯಸ್ಗೆ ತಲುಪಿತ್ತು. ಈ ವರ್ಷವು ವಾತಾವರಣದಲ್ಲಿ ತೇವಾಂಶ ಕೊರತೆಯಿಂದಾಗಿ ಉಷ್ಣಾಂಶ ಏರುಗತಿ ಪಡೆದಿದೆ. ಇನ್ನೊಂದೆಡೆ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ, ಪರಿಸರ ನಾಶ, ರಸ್ತೆ ಸೇರಿ ವಿವಿಧ ಕಾಮಗಾರಿಗಳಿಂದಾಗಿ ಹಗಲಿನ ಜತೆಗೆ, ರಾತ್ರಿ ಅವಧಿಯಲ್ಲಿಯೂ ಸೆಕೆಯ ಅನುಭವವಾಗುತ್ತಿದೆ. ಈ ತಿಂಗಳು ಮಳೆಯಾಗದಿದ್ದಲ್ಲಿ, ಮೇ ತಿಂಗಳು ದಾಖಲೆ ಪ್ರಮಾಣದಲ್ಲಿ ಗರಿಷ್ಠ ಉಷ್ಣಾಂಶ ವರದಿಯಾಗುವ ಸಾಧ್ಯತೆಗಳ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ.

‘ಬೃಹತ್ ಕಾಂಕ್ರೀಟ್ ಕಟ್ಟಡಗಳು, ಸಿಮೆಂಟ್ ಹಾಗೂ ಡಾಂಬರ್ ರಸ್ತೆಗಳು ಸೂರ್ಯನ ಶಾಖವನ್ನು ಹೀರಿಕೊಂಡು, ರಾತ್ರಿ ವೇಳೆ ಆ ಶಾಖವನ್ನು ಹೊರಹೊಮ್ಮಿಸುತ್ತವೆ. ಇದರಿಂದಾಗಿ ಎಲ್ಲ ಅವಧಿ ಸೆಕೆಯ ಅನುಭವ ಆಗುತ್ತದೆ. ವಾಹನಗಳಿಂದ ಹೊರಹೊಮ್ಮುವ ಶಾಖ, ಕೈಗಾರಿಕೆಗಳು ಹೊರಸೂಸುವ ಬಿಸಿ ಗಾಳಿ, ವಾತಾವರಣ ತಂಪಾಗಿಸುವ ಪರಿಸರದ ನಾಶ ಸೇರಿ ನಾನಾ ಕಾರಣದಿಂದ ತಾಪಮಾನ ಏರಿಕೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಾ ಹೋದಲ್ಲಿ ಮುಂದಿನ ದಿನಗಳು ಅದರ ಪರಿಣಾಮ ಇನ್ನಷ್ಟು ಭೀಕರವಾಗಿರುತ್ತದೆ’ ಎಂದು ಹವಾಮಾನ ತಜ್ಞರೊಬ್ಬರು ತಿಳಿಸಿದರು.

ಮಳೆಯಾಗದ ಪರಿಣಾಮ ಈ ಬಾರಿ ಬಿಸಿಲ ಧಗೆ ಸಾಮಾನ್ಯಕ್ಕಿಂತ ಹೆಚ್ಚಿದೆ. ಮುಂದಿನ ಹತ್ತು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯಾದಲ್ಲಿ ತಾಪಮಾನ ಇಳಿಯುತ್ತದೆ
ಸಿ.ಎಸ್. ಪಾಟೀಲ ಹವಾಮಾನ ಇಲಾಖೆ ತಜ್ಞ

ಎಳನೀರಿಗೆ ಹೆಚ್ಚಿದ ಬೇಡಿಕೆ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿರುವ ಜನ ಛತ್ರಿ ಟೋಪಿ ದುಪ್ಪಟ್ಟಾಗಳ ಮೊರೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಬಾಯಾರಿಕೆಯ ದಾಹ ತಣಿಸಿಕೊಳ್ಳಲು ಎಳನೀರು ಕಬ್ಬಿನ ರಸ ಮಜ್ಜಿಗೆ ತಂಪು ಪಾನೀಯಗಳನ್ನು ಕುಡಿಯುತ್ತಿದ್ದಾರೆ. ಕತ್ತರಿಸಿದ ಹಣ್ಣುಗಳನ್ನೂ ಸೇವಿಸುತ್ತಿದ್ದಾರೆ. ಹೆಚ್ಚಿದ ಬಿಸಿಲ ಝಳದಿಂದಾಗಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ₹60ರಿಂದ ₹70ಕ್ಕೆ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣು ಕೂಡ ನಗರದ ವಿವಿಧೆಡೆ ಕಾಣಸಿಗುತ್ತಿದ್ದು ಮಾರಾಟ ಭರದಿಂದ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.