ಬೆಂಗಳೂರು: ಕೆಂಗೇರಿ ಹೋಬಳಿಯ ಬಿ.ಎಂ. ಕಾವಲ್ ಸಮೀಪದ 500 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೌನ್ಶಿಪ್ ನಿರ್ಮಾಣ ಮಾಡಲು ಮುಂದಾಗಿರುವ ಕರ್ನಾಟಕ ಗೃಹ ಮಂಡಳಿ, ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದೆ.

ವಾಣಿಜ್ಯ ಕೇಂದ್ರ, ಅತಿ ಎತ್ತರದ ವಸತಿ ಸಮುಚ್ಚಯ, ಐ.ಟಿ ಕೇಂದ್ರ, ಮನೋರಂಜನಾ ವಲಯ, ಕ್ಲಬ್ಹೌಸ್, ಈಜುಕೊಳ ಹಾಗೂ ಹೊಸ ಆವಿಷ್ಕಾರಗಳನ್ನು ಒಳಗೊಂಡ ಟೌನ್ಶಿಪ್ ಹಾಗೂ ವಸತಿ ಯೋಜನೆ ಇದಾಗಿದೆ. ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ಅನುಮೋದನೆ ದೊರೆತಿದೆ ಎಂದು ಗೃಹಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ವಾಸ್ತುಶಿಲ್ಪಿಗಳನ್ನು ನೇಮಕ ಮಾಡಿದ್ದು, ನಕ್ಷೆ ಹಾಗೂ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್, ಚಿನ್ನಕುರುಚಿ, ವಸಂತನಹಳ್ಳಿ, ದೇವಗೆರೆ, ಕೆ.ಗೊಲ್ಲಹಳ್ಳಿ ಹಾಗೂ ಬಿಡದಿ ಹೋಬಳಿಯ ಕೋಡಿಯಾಲ, ಕರೇನಹಳ್ಳಿ ಗ್ರಾಮಗಳ 500 ಎಕರೆ ಜಮೀನನ್ನು 50:50 ಪಾಲುದಾರಿಕೆಯಡಿ ಪಡೆದು ಟೌನ್ಶಿಪ್ ನಿರ್ಮಾಣ ಮಾಡಲಾಗುತ್ತದೆ. ಒಪ್ಪಂದದಂತೆ ಅಭಿವೃದ್ಧಿಪಡಿಸಿದ ಜಾಗದಲ್ಲಿ ರೈತರಿಗೆ ಅವರ ಪಾಲಿನ ಶೇ 50ರಷ್ಟು ನಿವೇಶನಗಳನ್ನು ನೀಡಲಾಗುತ್ತದೆ.

ವಸತಿ ಯೋಜನೆಗೆ ಭೂಮಿ ನೀಡುವಂತೆ ಉತ್ತೇಜಿಸಲು ಪ್ರತಿ ಎಕರೆಗೆ 30 ಲಕ್ಷ ಹಣವನ್ನು ರೈತರಿಗೆ ಮುಂಗಡವಾಗಿ ನೀಡಲಾಗುತ್ತದೆ. ಜಮೀನಿಗೆ ಸಂಬಂಧಿಸಿದಂತೆ ರೈತರಿಂದ ಪಡೆದಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಈ ಯೋಜನೆಗೆ ಒಟ್ಟು ₹1,066.50 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಗೃಹ ಮಂಡಳಿಯೇ ಭರಿಸಲಿದೆ. ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ನಿರೀಕ್ಷೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಹೆಚ್ಚುವರಿ ಜಮೀನು ಲಭ್ಯವಾದರೆ, ವಿಸ್ತೀರ್ಣ ಮತ್ತು ಯೋಜನಾ ವೆಚ್ಚ ಹೆಚ್ಚಾದರೆ, ಅದಕ್ಕೆ ಸಂಪುಟದ ಅನುಮೋದನೆ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ.

‘ಗೃಹಮಂಡಳಿಯಿಂದ ನಿರ್ಮಿಸುತ್ತಿರುವ ಮೊದಲ ಟೌನ್ಶಿಪ್ ಇದು. ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ನಿವೇಶನ, ಪ್ಲ್ಯಾಟ್ಗಳನ್ನು ಹಂಚಿಕೆ ಮಾಡಲಾಗುತ್ತದೆ. ಯೋಜನೆ ಪ್ರಾಥಮಿಕ ಹಂತದಲ್ಲಿ ಇರುವುದರಿಂದ ಇನ್ನೂ ದರ ನಿಗದಿ ಮಾಡಿಲ್ಲ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ದರ ನಿಗದಿ ಮಾಡಿ, ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

2 ಬಿಎಚ್ಕೆ, 3 ಬಿಎಚ್ಕೆ ಫ್ಲ್ಯಾಟ್ಗಳನ್ನು ಸಾರ್ವಜನಿಕರಿಗಾಗಿ ನಿರ್ಮಿಸಲಾಗುತ್ತದೆ. ಇದಲ್ಲದೆ, ಐ.ಟಿ ಕೇಂದ್ರ, ವಾಣಿಜ್ಯ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಕಂಪನಿಗಳು ಇಲ್ಲೇ ಕಚೇರಿಗಳನ್ನು ಆರಂಭಿಸಬಹುದು. ಉದ್ಯೋಗಿಗಳು ಫ್ಲ್ಯಾಟ್ಗಳನ್ನು ಖರೀದಿಸಿ ವಾಸ ಮಾಡಬಹುದು. ಕಚೇರಿ, ಮನೆ ಒಂದೇ ಕಡೆ ಇರುವುದರಿಂದ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅವರಿಗೆ ಬೇಕಾದ ಕ್ಲಬ್ಹೌಸ್, ಈಜುಕೊಳ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ.

ಐ.ಟಿ ಕೇಂದ್ರ, ವಾಣಿಜ್ಯ ಕೇಂದ್ರ ಇತ್ಯಾದಿ ಗೃಹಮಂಡಳಿಯ ಅಧೀನದಲ್ಲೇ ಇರುತ್ತವೆ. ಇವುಗಳಿಂದ ಮಂಡಳಿಗೆ ನಿಗದಿತ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಟೌನ್ಶಿಪ್ಗೆ ಎಷ್ಟರಮಟ್ಟಿಗೆ ಬೇಡಿಕೆ ಇದೆ ಹಾಗೂ ಇದರ ಸಾಧಕ–ಬಾಧಕಗಳು ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಇದಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.