ಬೆಂಗಳೂರು: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಕಾವೇರಿ ಆಸ್ಪತ್ರೆಯ ತಂಡವು ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯ ಹೆದ್ದಾರಿ ಮತ್ತು ಹೊರವರ್ತುಲ ರಸ್ತೆಯ ಮಾರತ್ಹಳ್ಳಿ ಜಂಕ್ಷನ್ಗಳಲ್ಲಿ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಸಿಗ್ನಲ್ಗಳ ಬಳಿ 2 ಸಾವಿರಕ್ಕೂ ಹೆಚ್ಚು ವಾಹನ ಸವಾರರಿಗೆ ಮೂತ್ರಪಿಂಡದ ಆರೋಗ್ಯ ತಪಾಸಣಾ ಕಾರ್ಡ್ಗಳನ್ನು ವಿತರಿಸಲಾಯಿತು. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಹೇಗೆ ಮೂತ್ರಪಿಂಡ ಹಾನಿಗೊಳಿಸುತ್ತವೆ ಎಂಬುದರ ಬಗ್ಗೆ ವೈದ್ಯಕೀಯ ತಂಡ ಅರಿವು ಮೂಡಿಸಿತು.

‘ಬೆಂಗಳೂರು ಮತ್ತು ಸುತ್ತಮುತ್ತಲಿನ ಎಲೆಕ್ಟ್ರಾನಿಕ್ ಸಿಟಿ, ಮಾರತ್ಹಳ್ಳಿ, ಹೊಸೂರು ಹಾಗೂ ಚಿಕ್ಕಬಳ್ಳಾಪುರ ಸೇರಿ ವಿವಿಧೆಡೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ತಪಾಸಣೆಗೆ ಒಳಗಾದ 24,264 ಜನರ ಪೈಕಿ 6,600ಕ್ಕೂ ಅಧಿಕ ಮಂದಿಯಲ್ಲಿ ಅಧಿಕ ರಕ್ತದೊತ್ತಡ ಕಂಡು ಬಂದಿದೆ’ ಎಂದು ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ.ರಾಮಮೋಹನ್ ಶ್ರೀಪಾದ ಭಟ್ ತಿಳಿಸಿದರು.

‘ಮಧುಮೇಹ ಮತ್ತು ರಕ್ತದೊತ್ತಡವು ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿದ್ದು, ಯಾವುದೇ ಲಕ್ಷಣಗಳು ಕಾಣಿಸಿ ಕೊಳ್ಳುವ ಮೊದಲೇ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ’ ಎಂದು ಸಲಹೆ ನೀಡಿದರು.

ಕಾವೇರಿ ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರನ್, ‘ಆಸ್ಪತ್ರೆ ಸಮೂಹವು ಇದುವರೆಗೆ 760ಕ್ಕೂ ಹೆಚ್ಚು ಅಂಗಾಂಗ ಕಸಿ ಚಿಕಿತ್ಸೆಗಳನ್ನು ಪೂರೈಸಿದೆ. ಎಲೆಕ್ಟ್ರಾನಿಕ್ ಸಿಟಿ ಘಟಕದಲ್ಲಿ 76ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಗಳು ನಡೆದಿದ್ದು, ಈಗ ಮಾರತ್ಹಳ್ಳಿ ಘಟಕದಲ್ಲೂ ಕಿಡ್ನಿ ಕಸಿ ಸೇವೆ ಆರಂಭವಾಗುತ್ತಿದೆ’ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆಯು ವಿಶೇಷ ವೆಬ್ ಪೋರ್ಟಲ್ ಅನ್ನೂ ಬಿಡುಗಡೆ ಮಾಡಿದ್ದು, ನಾಗರಿಕರು ಆನ್ಲೈನ್ ಮೂಲಕ ತಮ್ಮ ಕಿಡ್ನಿ ಆರೋಗ್ಯದ ಅಪಾಯದ ಮಟ್ಟವನ್ನು ಉಚಿತವಾಗಿ ಪರೀಕ್ಷಿಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.