ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ( ಬಿಎಂಆರ್ಸಿಎಲ್) ಹಳದಿ ಮಾರ್ಗದಲ್ಲಿ ಜೂನ್ 3ರಿಂದ ಎರಡು ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಲಿವೆ.

ಆರ್ ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಚರಿಸುವ ಹಳಮಾರ್ಗದಲ್ಲಿ ಹೊಸ ಸೇರ್ಪಡೆಯೊಂದಿಗೆ 10 ರೈಲುಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಸೇವಾ ಆವರ್ತನೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಸೋಮವಾರದಿಂದ ಶುಕ್ರವಾರದವರೆಗೆ ಗರಿಷ್ಟ ದಟ್ಟಣೆ ಸಮಯದಲ್ಲಿ ಪ್ರಸ್ತುತ 9 ನಿಮಿಷಗಳಿಗೊಮ್ಮೆ ಇರುವ ರೈಲು 7 ನಿಮಿಷ ಅಂತರದಲ್ಲಿ ಸಂಚರಿಸಲಿದೆ.

ಸಾಮಾನ್ಯ ಸಮಯದಲ್ಲಿ ಸದ್ಯ 14 ನಿಮಿಷಕ್ಕೆ ಒಮ್ಮೆ ಸಂಚರಿಸುವ ರೈಲು ಇನ್ನು ಮುಂದೆ 10 ನಿಮಿಷ ಅಂತರದಲ್ಲಿ ಸಂಚರಿಸಲಿದೆ. ವಾರಾಂತ್ಯದ ದಿನಗಳಲ್ಲಿ ದಿನವಿಡೀ 10 ನಿಮಿಷದ ಅಂತರದಲ್ಲಿ ರೈಲುಗಳು ಸಂಚರಿಲಿವೆ.

ವಾರದ ಯಾವುದೇ ದಿನದಲ್ಲೂ ಆರ್ ವಿ ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.