ಕಳ್ಳತನವಾದ ಮೊಬೈಲ್‌ಗಳ ಮಾಹಿತಿಯನ್ನು ಇ–ಲಾಸ್ಟ್ ಆ್ಯಪ್ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಜಾಲತಾಣದಲ್ಲಿ ದಾಖಲು ಮಾಡಲಾಗುತ್ತದೆ. ತಾಂತ್ರಿಕ ಸುಳಿವು ಆಧರಿಸಿ ತನಿಖೆ ನಡೆಸಿ ಮೊಬೈಲ್ ಪತ್ತೆ ಹಚ್ಚಲಾಗುತ್ತದೆ. ಮೊಬೈಲ್ ಕಳೆದು ಹೋದ ತಕ್ಷಣ ಐಎಂಇಐ ಸಂಖ್ಯೆ ಸಹಿತ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್ ಅಥವಾ ಇ–ಲಾಸ್ಟ್ ಪ್ರತಿಯನ್ನು ಸಿಇಐಆರ್ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬೇಕು. ಆಗ ಕದ್ದ ಮೊಬೈಲ್‌ಗೆ ಹೊಸ ಸಿಮ್ ಹಾಕಿದಾಗ ಪೊಲೀಸರಿಗೆ ಸಂದೇಶ ಬರಲಿದೆ. ಅದನ್ನು ಆಧರಿಸಿ ತನಿಖೆ ಆರಂಭವಾಗಲಿದೆ.