ಬೆಂಗಳೂರು: ಪಬ್ವೊಂದರ ಒಳಗೆ ಪಾರ್ಟಿ ನಡೆಸುತ್ತಿದ್ದಾಗ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ, ಯುವಕನಿಗೆ ಇಬ್ಬರು ಯುವತಿಯರು ಥಳಿಸಿದ್ದಾರೆ. ಕೋರಮಂಗಲದ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಯುವತಿಯರು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ ಯುವತಿಯರು, ಯುವಕನನ್ನು ರಸ್ತೆಗೆ ಎಳೆದುತಂದು ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿದ್ದರು.

‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಮನವಿ ಮಾಡಿದರೂ ಯುವತಿಯರು ಪೊಲೀಸರ ಎದುರಲ್ಲೇ ಹಲ್ಲೆ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿದ್ದ ಸ್ಥಳೀಯರು ವಿಡಿಯೊ ಮಾಡಿದ್ದಾರೆ.

‘ಎರಡೂ ಕಡೆಯವರಿಗೆ ದೂರು ನೀಡುವಂತೆ ಸೂಚಿಸಲಾಗಿದೆ. ಆದರೆ, ಇದುವರೆಗೆ ಯಾರೂ ದೂರು ನೀಡಿಲ್ಲ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.