ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮನೆಗಳಿಗೆ ನುಗ್ಗಿದ ಚರಂಡಿ ನೀರು

Last Updated 30 ಆಗಸ್ಟ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಗುರುವಾರಸಂಜೆ ಜೋರಾಗಿಮಳೆಯಾಗಿದ್ದರಿಂದ ಕೆಲವೆಡೆ ತೊಂದರೆ ಉಂಟಾಯಿತು.

ಬಹುದಿನಗಳಿಂದ ಚಲವಾದಿಪಾಳ್ಯದ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಗುರುವಾರ ಸುರಿದ ಮಳೆಯಿಂದಾಗಿ ಚರಂಡಿ ತುಂಬಿ, ನೀರೆಲ್ಲ ರಸ್ತೆಗೆನುಗ್ಗಿತು.

ಸಾರ್ವಜನಿಕರು ಚರಂಡಿಯ ರಾಡಿನಡುವೆಯೇ ಸಾಗಿ ಬಂದರು.ಮಳೆನಿಂತ ಮೇಲೆಯೂ ರಸ್ತೆಗಳಲ್ಲಿ ನೀರು ನಿಂತಿತ್ತು.ಸಂಜೆ ಸುರಿದ ಮಳೆಯಿಂದಾಗಿ ಆ ರಸ್ತೆಗಳು ಪುನಃ ಜಲಾವೃತಗೊಂಡಿದ್ದವು.

ಮಳೆ ನಡುವೆಯೇ ಜೋರಾಗಿಗಾಳಿ ಬೀಸಿದ್ದರಿಂದ ಮಣಿಪಾಲ ಸೆಂಟರ್‌ ಬಳಿಯ ದೋಬಿಘಾಟ್‌ ರಸ್ತೆಯಲ್ಲಿ ಒಂದು ಮರ ಉರುಳಿ ಬಿದ್ದಿದೆ.ಮರ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯೂ ಉಂಟಾಯಿತು.

ಮಧ್ಯಾಹ್ನ ಸುಮಾರು ಅರ್ಧಗಂಟೆ ಮಳೆಯಾಯಿತು. ಮತ್ತೆ ಸಂಜೆ ಸುರಿದ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಮಳೆಯಲ್ಲಿ ನೆನದುಕೊಂಡೇ ಮನೆಯತ್ತ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT