ಶನಿವಾರ, ಅಕ್ಟೋಬರ್ 19, 2019
27 °C

ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಜೋರು ಮಳೆ

Published:
Updated:
Prajavani

ಬೆಂಗಳೂರು: ನಗರದ ಹಲವೆಡೆಲ್ಲಿ ಸೋಮವಾರ ಬೆಳ್ಳಂ ಬೆಳಿಗ್ಗೆ ಜೋರು ಮಳೆ ಸುರಿಯಿತು.

ಬೆಳಗಿನಜಾವ 4.30ರ ಸುಮಾರಿಗೆ ಆರಂಭವಾದ ಮಳೆ ಹಲವು ಕಡೆ ಅರ್ಧ ತಾಸಿಗೂ ಹೆಚ್ಚು ಧಾರಾಕಾರವಾಗಿ ಸುರಿಯಿತು. 7.30ರ ವರೆಗೆ ಮಳೆ ಬಿಡವು ಕೊಟ್ಟು ಆಗಾಗ ಬೀಳುತ್ತಲೇ ಇತ್ತು.

ರಾಜಾಜಿನಗರ, ಮೆಜೆಸ್ಟಿಕ್‌, ವಿಜಯನಗರ, ಬಸವೇಶ್ವರ ನಗರ, ಎಂ.ಜಿ ರಸ್ತೆ, ಹೊಸಳ್ಳಿ, ಮೈಸೂರು ರಸ್ತೆ ಸೇರಿದಂತೆ ಅಲ್ಲಲ್ಲಿ ಧಾರಾಕಾರ ಮಳೆ ಬಿತ್ತು.

Post Comments (+)